Jan 25, 2011

ಲೈಫು ಇಷ್ಟೇನೇ...

ಬಿದ್ರೆ ಹಾಸಿಗೆಗೆ ರಾತ್ರಿ ಇಟ್ಕೋತಿವಿ ನಾವು ಅಲಾರಾಂ
ಇದ್ರೆ ಬೆಳಿಗ್ಗೆ ಏಳ್ತಿವಿ ನಾವು ಆರಾಂ
ಹೋದ್ರೆ ಜನ ಹೇಳ್ತಾರೆ ನಮ್ಗೆ ರಾಂ ನಾಂ
 ಈ ಲೈಫು ಇಷ್ಟೇನೇ...

ಸ್ಪೂರ್ತಿ
: ’ಲವ್ ಲವಿಕೆ’ ಅಂಕಣ ವಿಜಯ್ ಕರ್ಣಾಟಕ ದಿ.೩೦/೧೨/೨೦೧೦
ದಿನಾಂಕ : ಜನೇವರಿ ೧೧|೨೦೧೧

Nov 7, 2010

ಯಡ್ಡಿ-ರೆಡ್ದಿ ಸೂತ್ರ

ರೆಡ್ಡಿ ಕೃಪೆ ಇದ್ದರೆ ಮಾತ್ರ ಯಡ್ಡಿ 

ಅವರು ಮುನಿದರೆ ೫ ಸೂತ್ರ ಅಡ್ಡಿ 
ಯಡ್ಡಿ ಹೋದಲ್ಲೆಲ್ಲಾ ಅನ್ನೋ ಹಾಗಿಲ್ಲಾ ಇನ್ಮುದೆ Show ಬಾ

 ಸ್ಪೂರ್ತಿ : ಶೋಭಾ ಕರಂದ್ಲಾಜೆಯವರನ್ನು ಕೆಳಗಿಳಿಸಲು ರೆಡ್ಡಿಗಳು ೫ ಸೂತ್ರಗಳನ್ನಿಟ್ಟಿದ್ದು
ದಿನಾಂಕ : ನವೆಂಬರ್ ೭| ೨೦೧೦

Apr 16, 2010

ಹಳೇ ಫ್ಟ್ಯಾಟೂ... ಹೊಸಾ ಪೇಂಟೂ...

ಹಳೆ ಫ್ಟ್ಯಾಟು ಹಳೆ ಗೂಡ್ಸು... ಹಳೆ ತರಾ ಹೊಯ್ 

ಈ ಪೆಂಟೂ ಈ ಸೆಂಟೂ ಬಲು ಬೇಜಾರ್ ಕನೋ ಹೊಯ್
 ಪೆಂಟಿಂಗ್ ಕಲಸಾನು ಗುತ್ತಿಗೆಗೆ ಕೊಡು 
ಕೆಲಸಾ ಭಾಳ್ ಚಲೋ ಮಾಡ್ತಾರು ನೋಡು... 
ಫ್ಟ್ಯಾಟನು ಬಾಡಿಗೆಗೆ ಕೊಡು ಇಲ್ಲ ಲೀಸಿಗೆ ಬಿಡು 
ಅಗ್ರೀಮೆಂಟನು ಸರಿಯಾಗಿ ಬರಿಸಿಕೊ ನೋಡು .. 
ನೀ ಮಾತ್ರ  ಮನೆಯಲ್ಲಿ ಸಾಮಾನುಗಳೆ ಕಟ್ಟು 
ಮೂವರ್ಸ್ ನ್ ಪ್ಯಾಕರ್ಸ್ ಮಹಿತಿ ಕೊಡುತ್ತೆ ಇಂಟರ್ ನೆಟ್ಟು 
ನೀನು ಮಾತ್ರ  ಕಾರು ಹತ್ತು ಚಿಂತೆ ಬಿಟ್ಟು
ಯಾತಕೆ ದೂಸ್ರಾ ಮಾತು ಎಲ್ಲಾ ಟೈಮ್ ವೇಸ್ಟು...

 ಸ್ಪೂರ್ತಿ :  ಯೋಗರಾಜ್ ಭಟ್ ಅವರ ಹಳೇ ಪಾತ್ರೆ ಹಾಡು ಮತ್ತು   ಹಳೆಯ ಫ್ಟ್ಯಾಟಿಗೆ ಹೊಸಾ ಪೈಂಟ್ ಮಾಡಿಸಿದ್ದು.. 
ದಿನಾಂಕ : ೪ ಫೆಬ್ರುವರಿ | ೨೦೧೦

Jun 2, 2009

ಗಂಡ - ಹೆಂಡತಿ

ಮೊದಲ ವರ್ಷ ಅವಳು beloved Speaker

ಎರಡನೇ ವರ್ಷ ಅವಳು ಮಾತ್ರ Allowed Speaker 
ಮೂರನೇ ವರ್ಷ ಅವರಿಬ್ರೂದು ಬರೀ Loud Speaker 

ದಿನಾಂಕ :  ೨ ಜೂನ್| ೨೦೦೯
ಸ್ಪೂರ್ತಿ :  ಟೀವಿ ಕಾರ್ಯಕ್ರಮದಲ್ಲಿ ಬಂದ ಜೋಕು 

May 30, 2009

ಅಂಜಲಿನಾ ಜ್ಯೂಲಿ - ಬ್ರ್ಯಾಡ್ ಪಿಟ್

ಮದುವೆ ಮುಂಚೆ ಹೇಳಿದ್ದಳು ಅವನಿಗೆ ಪಿಟ್ ಅನ್ನಬೇಡ  

ಕೇಳಲಿಲ್ಲಾ ಆತ ಅವಳ ಮಾತು 
 ಅಂದುಕೊಂಡಾ ಅವಳಿಗೆ ಯಾಕೆ ಅಂಜಲಿ(ನಾ) ?

ಅಂಜಲಿನಾ ಕಿರುಚಿದವಳು ಬ್ರ್ಯಾಡಾ 
ನೀ ನಾಗಿರುವೆ ನನಗೀಗ ಬ್ಯಾಡಾ 

 ಮದುವೆ ನಂತರ ನೀ ಎಲ್ಲೆಲ್ಲೂ ಹೊಡಿತಿರುವೆ ಜೋಲಿ 
ನೀನಾಗಲಿಲ್ಲಾ ನನ್ನ ತೋಳಲ್ಲಿ ಜೂ-ಇಲಿ 

ಸ್ಪೂರ್ತಿ : ಅಂಜಲಿನಾ ಜ್ಯೂಲಿ - ಬ್ರ್ಯಾಡ್ ಪಿಟ್ ವಿಚ್ಚೇದನ 
ದಿನಾಂಕ : ಮೇ ೩೦|೨೦೦೯

Nov 20, 2008

Pre-paid ಗಣಪಾ..


ಈ ಸರ್ತಿನೂ ನನ್ನೇ ಕರಿತಾನೆ ಅಂದ್ಕೊಂಡಿದ್ದೆ ಅಣ್ಣಪ್ಪಾ 

ಸೆಲೆಕ್ಟ್ ಮಾಡ್ಲಿಕ್ಕೆ ಅವರ ಮನೆಯಾ ಗಣಪ್ಪಾ 
 ಅದಕ ನಾ ಆಗಾಕತ್ತಿದ್ದೆ ನನ್ನದ ಸ್ಟೈಲ್ನ್ಯಾಗ prepared 
ಆದರ ಆಂವಾ ತನ್ನದ  ಸ್ಟೈಲ್ನ್ಯಾಗ ವೀಕೆಂಡ್ನ್ಯಾಗ ತಂದ್ಬಿಟ್ಟಾ ಗಣಪನಾ pre-paid 

 ಸ್ಪೂರ್ತಿ : ಅಣ್ಣ ಅರುಣ್ ಈ ಬಾರಿ ಗಣೇಶನನ್ನು ತನ್ನ ಕಾರಲ್ಲಿ front-seat ನಲ್ಲಿ ಕೂರಿಸಿ ತಂದ ಪ್ರಸಂಗ. ಗಣೇಶನಿಗೆ ತನ್ನದೇ ಆದ belt ಇದ್ದಿದರಿಂದ ಆತನಿಗೆ seat-belt ಹಾಕಿರಲಿಲ್ಲಾ:-)
ದಿನಾಂಕ : ಸೆಪ್ಟೆಂಬರ್ ೧|೨೦೦೮

Apr 23, 2008

ಎಲೆಕ್ಷನ್ ಟೈಮ್

ಪಕ್ಷದಿಂದ ಹೊರಗೆ ಹೋಗ್ತಿದಾರೆ ಗೋಪಿನಾಥ ಮುಂಡೇ

ಅವರ ಹಿಂದೆನೇ ಹೋಗಿದೆ ಅವರ ಚೇಲಾಗಳ ದಂಡೇ 
ಪಕ್ಷದಿಂದ ಪಕ್ಷಕ್ಕೆ ಹಾರಲು ಸಾಕು ಬರೀ one-Day 
ಮತದಾರನಾಗಿ ಇದ ನಾ ತಿಳಕೊಂಡೆ
ಎಲೆಕ್ಷನ್ ಹತ್ರ ಬಂದ್ರೆ ಎಲ್ಲಾರ್ದು ರಾಗ ಒಂದೇ 
ಟಿಕೇಟು ಕೊಡಿಸುವವನೆ ನಮ್ಮೆಲ್ಲರ ತಂದೆ.. 

ದಿನಾಂಕ :ಏಪ್ರೀಲ್ ೨೩|೨೦೦೮
ಸ್ಪೂರ್ತಿ :  ಗೋಪಿನಾಥ್ ಮುಂದೆ ರಾಜಕೀಯ ಪಕ್ಷಾಂತರ