Dec 21, 2017

ಕೈ ಕೆಸರು

ಕೈ ಕೆಸರು

ಕೈ ಕೆಸರು
ಬಾಯಿ ಮೊಸರು

ನೆಲಕ್ಕೆ ಬಿದ್ದಿತು ಹಸ್ತ
ಜನ ಒಪ್ಪಿತು ಸಿಧ್ಧ ಹಸ್ತ

ರಾಗಾ ಕೈಯಿಗೆ ಕೆಸರು
ಅಮಿತ್ ಬಾಯಿಗೆ ಮೊಸರು
ಗುಜರಾತ್ ನಲ್ಲುಳಿತು ಮೋದಿ ಹೆಸರು

ಸ್ಪೂರ್ತಿ: ಗುಜರಾತ್ ಚುಣಾವಣೆ
ದಿನಾಂಕ: ೨೧-ಡಿಸೆಂಬರ್-೨೦೧೭

Dec 1, 2017

ಕಷ್ಟಮರ್ ಕೇರ್

ಕಷ್ಟಮರ್ ಕೇರ್

ಅಲ್ಲಿ ಕಷ್ಟಮರ್ ಹೇಳಿದ್ದೆಲ್ಲಾ ಖರೇ
ಇಲ್ಲಿ ನಮ್ಮ ಕಷ್ಟಕ್ಕೆ ಅನ್ನುವರಿಲ್ಲಾ ಕ್ಯಾರೇ

ಅಲ್ಲಿ ಜೀವನ ಒಗ್ಗಿದೆ
ಇಲ್ಲಿ ಜೀವನ ತಗ್ಗಿದೆ

ಅವರು ಕೊಡುವರು ನಮಗೆ ಸಮಯಕ್ಕೆ ಸರಿಯಾಗಿ  ಸೇವೆ
ಇವರು ಮಾಡುವರು ನಮ್ಮ ಸಮಯ ಸರಿಯಾಗಿ Shave

ಅವರು ಕಷ್ಟಮರ್ ಗೆ ಕೇರ್  ಎನ್ನುವರು
ಇವರು ಕಷ್ಟಮರ್ ಗೆ ಕೆರ ಎನ್ನುವರು

ಸ್ಪೂರ್ತಿ: ದೊಡ್ಡ ಮತ್ತು ಚಿಕ್ಕ ಊರುಗಳಲ್ಲಿನ ಕಷ್ಟಮರ್ ಕೇರ್ ನ ಅನುಭವ
ದಿನಾಂಕ: ೬-ಡಿಸೆಂಬರ್-೨೦೧೭

ರಾಮ ಕೋಟಿ

ರಾಮ ಕೋಟಿ

ಎಲ್ಲರು ಬರೆವರು ರಾಮ ಕೋಟಿ
ನಾ ಬರೆವೆ Rhyme ಕೋಟಿ
ಯಾರೊಂದಿಗೂ ಬೇಡವೆನಗೆ ಪೈಪೋಟಿ 
ನನಗೆ ನಾನಾದರೆ ಸಾಕು ಸಾಟಿ
ಭಗವಂತ ಕೊಡುವ ಮುನ್ನ ಎನಗೆ ಸೂಟಿ
ಪ್ರತಿದಿನ  ಹನಿಗವನ ಬರೆಯಲು ಮಾಡುವೆ ನಾ ಓಟಿ

ಸ್ಪೂರ್ತಿ : ರಾಮಕೋಟಿ
ದಿನಾಂಕ: ೯-ಡಿಸೆಂಬರ್-೨೦೧೭

Nov 21, 2017

ಜಪಾನಿ ಹೆಸರುಗಳು

ಜಪಾನಿ ಹೆಸರುಗಳು

ಫ್ಯೂಜಿಗಿಂತಲೂ ತೆಳ್ಳಗಿರುವಾವಾ ಫ್ಯೂಜಿ
ಸೂಜಿಗಿಂತ ಚೂಪ ಕಣ್ಣಿನಾಂವಾ ಸೂಜಿ

ಮಜಾಕಿಲೇ ಕೆಲಸ ಮಾಡಾಂವಾ  ಮಿಯಾಜಾಕಿ
ಕವನ ಬರೆದು ರಂಜಿಸಾಂವಾ ಕಾವಾಸಾಕಿ

ಸದಾ ಇನ್ನೊಬ್ಬರ ಜೋಡಿ ಬರಾಂವಾ ಇನಾಬಾ

ಸದಾ ಸಂತೋಷದಿಂದಿರಾಂವಾ ಸತೋಷಿ
ಹಿರೋಗಳ ಹಾಗೆ ಸ್ಮೈಲ್ ಕೊಡಾಂವಾ ಹಿರೋಷಿ

ಏಕಾಏಕಿ ಸೀರಿಯಸ್  ಆಗಾಂವಾ ತಕಾಯುಕಿ
ಸುಜನರ ನಡುವೆ ಸದಾ ಇರಾಂವಾ ಸುಜುಕಿ

ಬೆಳ ಬೆಳಿಗ್ಗೆ ಕಾಲ್ ಮಾಡಾಂವಾ ಏಬಿಸಾವಾ
ಗಸಗಸೆ ಪಾಯಸಾ ಇಷ್ಟ ಪಟ್ಟಾವಾ ಹಸೆಗಾವಾ

ದಿನಾಂಕ: ೨೭-ನವೆಂಬರ್-೨೦೧೭
ಸ್ಪೂರ್ತಿ: ಜಪಾನಿ ಸಹೊದ್ಯೋಗಿಗಳ ಹೆಸರು ನೆನಪಿಟ್ಟುಕೊಂಡ ಬಗೆ

Nov 17, 2017

ಲಂಚ ಲಂಚ ಲಂಚ

ಲಂಚ ಲಂಚ ಲಂಚ

ಟೇಬಲ್ ಮೇಲಿಂದ ತಿಂದ್ರೆ Lunch
ಟೇಬಲ್ ಕೆಳಗಿಂದ ತಿಂದ್ರೆ ಲಂಚ

ದಿನಾಂಕ : ೧೭-ನವೆಂಬರ್-೨೦೧೭
ಸ್ಪೂರ್ತಿ : ಸತೀಶ  ಆಚಾರ್ಯ ಅವರ ಕಾರ್ಟೂನ್‌

Jul 18, 2017

ಚಾ ರಜಾ

ಚಾ ರಜಾ
ನಾ ಚಾರಜಾಗಲು ದಿನಾ  ಐದು ಕಪ್ ಚಾ ಕೋಟಾ ರಿ
ನನ್ನವಳೀಗ ನನಗೆ ಪೂರ್ತಿ ಚಾ-ರಜಾ ಕೊಟ್ಟಿರಲು
ನಾನಾಗಿರುವೆ ಕನಿಷ್ಠ ಚಾರ್ಜಿಲ್ಲದಾ ಬ್ಯಾಟರಿ

ದಿನಾಂಕ : ೧೭-ನವೆಂಬರ್-೨೦೧೭
ಸ್ಪೂರ್ತಿ : ನನ್ನ ಚಾ-ಕುಡುಕರತ್ನನ ಪರಪಂಚ

May 10, 2017

ಊಬರ

(K) UBER

ಯಾರೋ ಕೇಳಿದರು ಊಬರಕ್ಕೆಕೆ ಬಂತು ಬರ
ನಾನಂದೆ  ಹೆಸರಲ್ಲೇ ತುಂಬಿದೆ ಬರ
ಅದಕೆ ಸೇರಿಸಿದ್ದರೆ  K ಆಗುತಿದ್ದಾ ಕುಬೇರ

ರಚನೆ: ಬಸವರಾಜಜ ಯಾದವಾಡ
ಸ್ಪೂರ್ತಿ : UBER ಕ್ಯಾಬ್ ಗಳು
ದಿನಾಂಕ: 9-ಮೇ-2017

May 7, 2017

ಪ್ಯಾಕಪ್

ಪ್ಯಾಕಪ್

ಮರುಳಾದ ಹುಡುಗ ಕಂಡವಳ ಮೇಕ್ ಅಪ್ ಅಲ್ಲಿ ಇಲ್ಲಿ ನೋಡಿ ಸುಧಾರಿಸಿಕೊಂಡ ತನ್ನ ಗೆಟ್ ಅಪ್
ಅವಳು ಕೇಳಿದ್ದಕೆಲ್ಲಾ ಇವಾ ಮಾಡುವಾ ಥಮ್ಸ ಅಪ್
ಇಲ್ಲವೆಂದಾಗಲೆಲ್ಲಾ ಸಿಂಡರಿಸಿ ಹೇಳುವಳು ಷಟ್ ಅಪ್
ಖಾಲಿಯಾಗುತ್ತಿರುವ ಜೇಬ ಕಂಡು ಅಂದನವಾ ಇನ್ನ ಸಾಕ ಅಪ್
ಅರಿವಾಯ್ತು ತನಗಿಲ್ಲಾ ಮನೆಯಲಿ ಮನೀ ಬ್ಯಾಕ್ ಅಪ್
ಹುಡುಗ ಮಾಡಿಕೊಂಡಾ ಸಧ್ಯ ಪ್ಯಾಕ್ ಅಪ್
ಸಧ್ಯ ಅವರಿಬ್ರದಾಗಿದೆ ಬ್ರೇಕ್ ಅಪ್


ಬರಹ: ಬಸವರಾಜ ಯಾದವಾಡ 
ಸ್ಫೂರ್ತಿ: ಕ್ರಷ್ ಕ್ರಷ್  ಎಂದು ಕೃಶವಾಗುತ್ತಿರುವ ಹುಡುಗರು 
ದಿನಾOಕ : 07-ಮೇ-2017

May 4, 2017

ಪ್ರಸಾದ ಬಿಡಪಾ

ಪ್ರಸಾದ ಬಿಡಪಾ
ಬೇಡ ಬೇಡ್ರಪಾ ಅವಂಗೆ ಕೊಳ ತೊಡಿಸಬೇಡ್ರಪ್ಪಾ 
ಪ್ರಸಾದಗೆ ನಿಮ್ಮ ಪ್ರಸಾದ ಕೊಡ ಬೇಡಪ್ಪಾ
ಅಪ್ಪನಿಗಾಗಿ ಮನೇಲಿ ಕಾಯುತಿರುವ ಇವನ ಮಗ  ಅದಮ್ ಬಿಡಪ್ಪಾ
ಜೊತೆಯಾಗಿ ಸಪ್ತಪದಿ ತುಳಿದ ಈತನಮಿಡಿತ ತುಡಿತ ನಾ  ಜುಡಿತ ಬಿಡಪ್ಪಾ
ಇನ್ನೂ ಈತ ಮದುವೆ ಮಾಡಬೇಕು ಆವಾ ಬೆಳೆದು  ನಿಂತವಳೇ  ಮಗಳು ಅವಿವಾ ಬಿಡಪ್ಪಾ

ಬರಹ: ಬಸವರಾಜ ಯಾದವಾಡ
ಸ್ಪೂರ್ತಿ : 2005 ರಲ್ಲಿ ಫ್ಯಾಷನ್ ಸ್ಟೈಲಿಸ್ಟ್  ಪ್ರಸಾದ  ಬಿಡಪ್ಪಾ ಅವರನ್ನು ದುಬೈ ಪೋಲಿಸರಿಂದ  ಅವರ ಪತ್ನಿ  ಜುಡಿ    ಬಿಡಿಸಿಕೊಂಡು ಬಂದದ್ದು
ದಿನಾಂಕ : ನವೆಂಬರ್-2005

Apr 30, 2017

ಚಾಳಿ ಟೂ

ಚಾಳಿ ಟೂ

ನನ್ನವಳು ಬಿಟ್ಟಿರುವಳು ನನ್ನೊಂದಿಗೆ ಚಾಳಿ ಟೂ
ಯಾಕಂದ್ರಾ ನಾ ಹಗಲೆಲ್ಲಾ ಕೇಳ್ತಿನಂತ ಚಾ ಬೈ ಟೂ

ಸ್ಪೂರ್ತಿ : ನೀರಡಿಕೆಗಿಂತ ಹೆಚ್ಚಾದ ನನ್ನ  ಚಾಅಡಿಕೆ
ದಿನಾಂಕ: 30-ಎಪ್ರಿಲ್-2017

Apr 26, 2017

ಹೋಮಿಲಿ

ಹೋಮಿಲಿ

ಹೆಣ್ಣಿನ ಕಡೆಯವ್ರರಂದ್ರು ನಮ್ ಹುಡುಗಿ ತುಂಬಾ ಹೋಮಿಲಿ
ನಾನಂದೆ ಮದುವೆಯಾದ ಮೇಲೆ ಹುಡುಗನ್ನ ಮಾಡ್ತಾಳೆ ಬಿಡಿ  ಪೂರ್ತಿ Home-ಇಲಿ

ಬರಹ: ಬಸವರಾಜ ಯಾದವಾಡ
ಸ್ಪೂರ್ತಿ: ಹೆಣ್ಣು ಮಕ್ಕಳ ಕಡೆಯವ್ರು
ದಿನಾಂಕ: 26-ಎಪ್ರೀಲ್-2017

Apr 13, 2017

ಬ್ಲಾಗಿಷ್ಠ

ಬ್ಲಾಗಿಷ್ಠ

ನಾನಲ್ಲ ಸ್ಯಾಡಿಷ್ಟ
ಎನಗಿಲ್ಲ ಚಟಗಳು  ದುಷ್ಟ
ಸಂಬಳ ಕೇಳಲು ಹೇಳಲು ಇಲ್ಲ ಎನಗಿಷ್ಟ
ಕಲಿತಿರುವೆ ನಾ ಕರ್ಮ ಪ್ರಕಾರ ಬರುವುದು ಕಷ್ಟನಷ್ಟ
ಬರೆಯುವುದೇ ನನಗಿಷ್ಟ
ಬರವಣಿಗೆಯಿಂದಲೇ ನಾ ಬಲಿಷ್ಟ
ಅದಕೆ ನಾನಾಗಿರುವೆ  ಬ್ಲಾಗಿಷ್ಟ

ಬರಹ: ಬಸವರಾಜ ಯಾದವಾಡ
ಸ್ಪೂರ್ತಿ : ಪ್ರಾಸ ಪ್ರಪಂಚ
ದಿನಾಂಕ: 13-ಎಪ್ರಿಲ್-2017

ಹೈ-ಲೋ ಜಿಂದಗಿ

ಹೈ-ಲೋ ಜಿಂದಗಿ

High ನಲ್ಲಿ  ಸ್ಥೈರ್ಯವ  ಉಳಿಸಿಕೊಂಡರಬೇಕು
Low ನಲ್ಲಿ ಧೈರ್ಯವ ಲೋನ್ ತಗೋಬೇಕು
ಬದುಕಿನಲ್ಲಿ  High-Low  ಎರಡರಲ್ಲೂ balance ಇರಬೇಕು

ಬರಹ: ಬಸವರಾಜ ಯಾದವಾಡ
ಸ್ಪೂರ್ತಿ:  ಬದುಕಿನ High-Lowಗಳು
ದಿನಾಂಕ: 12-ಎಪ್ರೀಲ್-2017

Apr 10, 2017

ಹಸ್ ಬೆಂಡ

ಹಸ್ ಬೆಂಡ

ಮದುವೆಗೆ ಮುನ್ನ ಮಹಾ ಭಂಡ.
ಮದುವೇಲಿ ಆತ ಕೇವಲ ಹಸ್ಬೆಂಡ.
ನಂತರ ತೂಕವಿರದ ತರ್ಮೋಕೊಲ್ ಬೆಂಡ
ಹೈಕಮಾಂಡ್ ಮುಂದೆ ಆಗಲೇಬೇಕು bend ..
ಇಲ್ಲದಿರೆ ಗಂಡ ಪದವಿಯಿಂದ suspend.

ಬರಹ: ಬಸವರಾಜ ಯಾದವಾಡ
ಸ್ಪೂರ್ತಿ : ವಾಟ್ಸಪ್ನಲ್ಲಿ ಬಂದ ವ್ಯಂಗ್ಯಚಿತ್ರ
ದಿನಾಂಕ: 8-ಎಪ್ರಿಲ್-2017

Apr 9, 2017

ಕಲ್ಲು

ಕಲ್ಲು

ಪ್ರ್ಯಾಕ್ಟೀಸ್ ಇಲ್ಲಾಂದ್ರೂ ಪ್ರಯತ್ನ ಮಾಡುವೆ ಎನ್ನುವವ ಜೀವನದಿ ಪ್ರ್ಯಾಕ್ಟಿ ಕಲ್ಲು
ಏಕ ಏಕ ಕಾಸು ಸೇರಿಸಿ ಖರ್ಚು ಉಳಿಸಿದವಾ ಎಕನಾಮಿ ಕಲ್ಲು
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಕಲಿತವ ಮೆಥೆಮೆಟಿ ಕಲ್ಲು
ಲೂಜಾಗಿ ಮಾತಾಡದೇ ಎಲ್ಲಾ ಸಮಸ್ಯೆಗೆ ಲಾ ಪ್ರಕಾರ ಉತ್ತರ ಹುಡುಕುವವ ಲಾಜಿ ಕಲ್ಲು
2 ಮಿನಿಟ್ನಲ್ಲಿ ಮ್ಯಾಗಿತರಾ ಕೆಲ್ಸ ಮುಗಿಸುವವ ಮ್ಯಾಜಿ ಕಲ್ಲು
ಟಿಪಿ ಕೈಲಾಸಂ ಓದದಿದ್ರೂ ಕನ್ನಡ ಮಾತನಾಡುವವ ಟಿಪಿ ಕಲ್ಲು
ಕೆಮ್ಮಿದರೂ ಔಷಧಿ ತೆಗೆದುಕೊಡು ದೇಹದಿ ತುಂಬಿಕೊಂಡಿರುವವಾ ಕೆಮಿ ಕಲ್ಲು
ಯಾವ ಕ್ಲಾಸಿಗೂ ಹಾಜರಾಗದೇ ಜೀವನದಿ ಮುಂದೆ ಬಂದವಾ ಕ್ಲಾಸಿ ಕಲ್ಲು
ಸಿನಿಮಾ ನೋಡುತಲೆ ಭ್ರಮಾಲೋಕದಿ ಬದುಕುವವ ಸಿನಿ ಕಲ್ಲು
ಕಾಮಿ ತರ ಕಣ್ಣು ಹೋದೆಡೆ ಮನಸು ಕೊಟ್ಟವಾ ಕಾಮಿ ಕಲ್ಲು
ಹಿಸ್ಟರಿ ಓದದಿದ್ದರೂ ಗಂಟೆಗಟ್ಟಲೇ ಕೊರೆಯುವವ ಹಿಸ್ಟೋರಿ ಕಲ್ಲು
ಕಾಲೇಜಿಗೆ ಹೋಗದೆ ಪರಿಸರ ತಿಳಿದುಕೊಡ ರೈತ ಅವಾ ಎಕೊಲಾಜಿ ಕಲ್ಲು
ಕೆಲ್ಸ ಚೆನ್ನಾಗಿದ್ರೂ ಸದಾ ಕಿಟಿ ಕಿಟಿ ಮಾಡುವವ  ಕ್ರಿಟಿ-ಕಲ್ಲು
ಎಷ್ಟೇ ಎತ್ತರಕ್ಕೇರಿದರೂ ತನ್ನ ಮೂಲ ಮರೆಯದವಾ ಎತಿ ಕಲ್ಲು

ಬರಹ: ಬಸವರಾಜ ಯಾದವಾಡ
ಸ್ಪೂರ್ತಿ : ಇಂಗ್ಲೀಷ್ ಶಬ್ದಕೋಶ ತುಂಬಿಕೊಂಡಿರುವ 'ಕಲ್ಲುಗಳು'
ದಿನಾಂಕ: 7-ಎಪ್ರಿಲ್-2017

Mar 28, 2017

ವಿಷಯ ಈಗೋ?

ವಿಷಯ ಈಗೋ?

ಅವರಿಗೂ ಗೊತ್ತಿದೆ  ಬಿದ್ದು ಹೋಗಲಿದೆ
ಈ ದೇಹ ಗೋ ಆಗೋ
ಐವತ್ತಾದರೂ ಬಿಡುತಿಲ್ಲ
ಮೈತುಂಬ ತುಂಬಿರೋ Ego

ಬರಹ: ಬಸವರಾಜ ಯಾದವಾಡ
ದಿನಾಂಕ: 3-ಮಾರ್ಚ-2017
ಸ್ಪೂರ್ತಿ: ಹೀಗೊಬ್ಬರು ಮಿತ್ರರು

Mar 18, 2017

ಹಂಬಲ

ಹಂಬಲ

ನಾ ತುಂಬಾ Humble ನಂತೆ
ಅದಕೆನಗೆ ಕೊಡುವರು ತಮ್ಮ ಬೆಂಬಲ ವಂತೆ
ಅವರ ಕೆಲಸ ಮುಗಿದಮೇಲೆ ಕೇಳರು ನನ್ನ ಹಂಬಲ ವೆನಂತೆ..

ಬರಹ: ಬಸವರಾಜ ಯಾದವಾಡ
ದಿನಾಂಕ: 18-ಮಾರ್ಚ-2017
ಸ್ಪೂರ್ತಿ: ಹೀಗೊಂದು ಘಟನೆ

Mar 6, 2017

ಲೇ-ನೋವು

ಲೇ-ನೋವು
ಅದ್ಯಾವ ಗಳಿಗೇಲಿ ಕೊಂಡೆನೊ
ನನ್ನ ಹೊಸ ಫೋನ್ ಲೇ-ನೋವು
ದಿನ ಬ್ಯಾಟರೀ ಕೊಡುವುದು ಬೆಳಗ್ಗೆಯಿಂದ   ಲೇ-ನೋವು
ವಾರಂಟಿಲೀದ್ರೂ sparesಗಳಿಂದ ತಪ್ಪಲಿಲ್ಲ ಖರ್ಚಿನ ತ ಲೇನೋವು

ಬರಹ: ಬಸವರಾಜ ಯಾದವಾಡ
ದಿನಾಂಕ: 6-ಮಾರ್ಚ-2017
ಸ್ಪೂರ್ತಿ: ನನ್ನ Lenovo K5 Mobile

Mar 2, 2017

ಇನ್ಫೋಸಿಸ್ ಸಿಕ್ಕ

ಇನ್ಫೋಸಿಸ್ ವಿಶಾಲ ಸಿಕ್ಕ

ಅದ್ಯಾವ ಗಳಿಗೇಲಿ ಅವರಿಗೆ ಹ್ರದಯ ವಿಶಾಲ ಸರಿ ಸಿಕ್ಕನೋ
ಇವರ ಶಿಸ್ತು ಬದ್ಧ ವೃತ್ತಿ ಪಾರಂಪರ್ಯಕ್ಕೆ ಹೇಳುವ ಬರಿ ನೋನೋ

ಕಂಪನಿಯ ಖಜಾನೆಯೊಳಗ ಸೀದಾ ಹೊಕ್ಕ
ಕಂಪನಿ ಬಿಟ್ಹೋದವ್ರಿಗೂ  ಹಂಚಿ ಬಿಟ್ಟ  ಕೂಡಿಟ್ಟ ರೊಕ್ಕ
ಹೂಡಿಕೆದಾರರು ಕೇಳಿದರು ತಮ್ಮಾ ಸಿಕ್ಕ
ತಿಳಕೊಂಡಿಯೇನು ರೊಕ್ಕ ಅಂದ್ರ  ಹುಂಚಿ ಪಕ್ಕ
ಯಾರ್ರಿಗೆ ಎಷ್ಟೆಷ್ಟು ಕೊಟ್ಟಿ ತೋರ್ಸು ನೀ  ಲೆಕ್ಕ

(ಸೂಚನೆ: ಹುಂಚಿ ಪಕ್ಕ = ಹುಣಸೆ ಬೀಜಗಳು)

ಬರಹ: ಬಸವರಾಜ ಯಾದವಾಡ
ಸ್ಪೂರ್ತಿ: ಇನ್ಫೋಸಿಸ್ ನ ವಿಶಾಲ ಸಿಕ್ಕ ಮತ್ತು ಮಾಲೀಕರ ನಡುವಿನ ಭಿನ್ನಮತ
ದಿನಾಂಕ: 6-ಮಾರ್ಚ-2017

ಶಿವರಾತ್ರಿ

ಶಿವರಾತ್ರಿ
ನಂಬಿದರೆ Someshwar
ನಂಬದಿರೆ Some Eshwar

ಬರಹ: ಬಸವರಾಜ ಯಾದವಾಡ
ದಿನಾಂಕ: 24-ಫೆಬ್ರುವರಿ-2017
ಸ್ಪೂರ್ತಿ : ಶಿವರಾತ್ರಿ ಜಾಗರಣೆ

Feb 22, 2017

ಮನಿ ದೇವ್ರು

ಮನಿ ದೇವ್ರು

ನಾಮ ಹಾಕಿಕೊಳ್ಳುವವರಿಗೆ ಆತ ಮನಿ ದೇವ್ರು
ವಿಭುತಿ ಹಾಕಿಕೊಳ್ಳುವವರಿಗೆ ಆತ money ದೇವ್ರು
ಅವರಿಗೆ  ಆರ್ಡರ್ ಮಾಡೋ ಮನಿ ದೇವ್ರು
ಇವರಿಗೆ ಮನಿ ಆರ್ಡರ್ ಮಾಡೋ ದೇವ್ರು

ಅವರು ಸಂಕಟ ಬಂದಾಗ ತಿಮ್ಮಪ್ಪನ ನೆನೆಸಲೇ ಬೇಕು
ಇವರು ಸಂಬಳ ಬಂದಾಗ ತಿಮ್ಮಪ್ಪಗೆ ಕಳಿಸಲೇ ಬೇಕು

ಬರಹ: ಬಸವರಾಜ ಯಾದವಾಡ
ದಿನಾಂಕ:12/2/2017
ಸ್ಪೂರ್ತಿ: ತಿರುಪತಿ ತಿಮ್ಮಪ್ಪ

Feb 1, 2017

Marriage Ceremony

Marriage Ceremony
ಮಿತ್ರರೊಬ್ಬರು ಕೇಳಿದರು
ಬರ್ತೀರಾ  friend Marriage Ceremonyಗೆ
ವಿವಾಹ ಬಂಧನಕ್ಕೊಳಗಾಗಿರುವ ಮಿತ್ರನ
ಬಿಳ್ಕೊಡಲು ಬರುವೆನೆಂದೆ ನಾ ಆತನ Marriage ಸೆರೆಮನಿಗೆ..

ಸ್ಪೂರ್ತಿ: ಮಿತ್ರನ ಮದುವೆ ಆಹ್ವಾನ
ದಿನಾಂಕ:1-ಫೆಬ್ರುವರಿ-2017

Jan 18, 2017

ಜನವರಿ

ಜನವರಿ
ಇದಾಗಲೇ ಶುರುವಾಯಿತು ಹೊಸ ವರ್ಷದ ಮೊದಲ ತಿಂಗಳು ಜನವರಿ
ಅದಾಗಲೇ ಹಾಳು Resolutions ಅನ್ಕೊಂಡು ಮಾಡೋಕೆ ಶುರು ಮಾಡಿದ್ರು ಜನ-worry

ಸ್ಪೂರ್ತಿ: New Year Resolutions
ದಿನಾಂಕ:18-ಜನವರಿ-2017

Jan 15, 2017

Thermas ತಳ

ಥರ್ಮಾಸ ತಳ

ಆಫೀಸೇ ನನ್ನ ಧರ್ಮಸ್ಥಳ
ಕುರ್ಚಿಯೇ ನನ್ನ ಕರ್ಮಸ್ಥಳ
ಪರಿಸ್ಥಿತಿ ಗರಂ ಆದಾಗ ಅದು ಥರ್ಮಾಸ ತಳ
ಸ್ಪೂರ್ತಿ: ಥರ್ಮಾಸ ಫ್ಲಾಸ್ಕ
ದಿನಾಂಕ:16-ಜನೇವರಿ-2017

Jan 12, 2017

ಟೀನಾ

ಟೀನಾ


ಟೀ ಅಂಗಡಿ ಮುಂದೆ ನಿಂತಾಗ ನಾ

ಗೊತ್ತಿದ್ದೂ ಕೇಳುವರು ಪ್ರತಿ ದಿನಾ

ಎನಗೆ ಮಿತ್ರರು ಇವತ್ತೂ ಟೀನಾ?

ಹೇಳಿದ್ದೇ ಹೇಳುವೆ ನಾ
ಹೌದು ಮನೇಲಿ ನೈನಾ ಇಲ್ಲಿ ಟೀನಾ...

ಸ್ಪೂರ್ತಿ: ನನ್ನ ಟೀ/ಕಾಫಿ ಕುಡುಕ ಮಿತ್ರರು
ದಿನಾಂಕ: 17-ಜನೇವರಿ-2017

ಗಾದೆ ಮಾತುಗಳು-1

ಗಾದೆ ಮಾತುಗಳು-1
ಎತ್ತು ಎರೆಗೆ
ಕೋಣ ಕೆರೆಗೆ
ಹೆಂಡತಿ ಊರಿಗೆ
ಗಂಡ ಬಾರಿಗೆ..

ದಿನಾಂಕ: 12-1-2017
ಸ್ಪೂರ್ತಿ:  ಬೀರ್ ಬಲ್ಲ ಮಿತ್ರ ರು

Jan 11, 2017

ರೋಮ-antique

ರೋಮ-antique

ಆಗಿರಬಹುದು ನನ್ನ ರೋಮ-antique
ಆಗಿರುವೆನು ನಾನೆಂದು ರೋಮ್ಯಾಂಟಿಕ್...

ಸ್ಪೂರ್ತಿ: ಇತ್ತೀಚೆಗೆ Hair Dye ಮಾಡಿಸಿಕೊಂಡಿದ್ದು
ದಿನಾಂಕ: 17-ಜನೇವರಿ-2017

ಹಾರ-ತಿಹಾರ

ತಿಹಾರ

ಕೊರಳೊಳು ಹಾಕಿಸಿಕೊಂಡಾ ಅವಾ  ಹಾರ
ಹಸಿದ  ಹೆಬ್ಬುಲಿಗೆ ಅವನಾದ ಆಹಾರ
ಅನುದಿನ ಕಾದಿದೆ ಅವನಿಗಾಗಿ ಸಜ್ಜಾದ ಸೇನೆಯ ಪ್ರಹಾರ
ಪ್ರತಿದಿನ ಅವಾ ಹುಡುಕಲಿರುವಾ ಶಾಂತಿಗಾಗಿ ಪರಿಹಾರ
ಬದುಕಿರುವವರೆಗೆ ತಪ್ಪದೀ ಜೈಲು ತಿಹಾರ

ಸ್ಪೂರ್ತಿ: ಮಿತ್ರನ ಮದುವೆ
ದಿನಾಂಕ: 1-ಫೆಬ್ರುವರಿ-2017