Apr 23, 2008

ಎಲೆಕ್ಷನ್ ಟೈಮ್

ಪಕ್ಷದಿಂದ ಹೊರಗೆ ಹೋಗ್ತಿದಾರೆ ಗೋಪಿನಾಥ ಮುಂಡೇ

ಅವರ ಹಿಂದೆನೇ ಹೋಗಿದೆ ಅವರ ಚೇಲಾಗಳ ದಂಡೇ 
ಪಕ್ಷದಿಂದ ಪಕ್ಷಕ್ಕೆ ಹಾರಲು ಸಾಕು ಬರೀ one-Day 
ಮತದಾರನಾಗಿ ಇದ ನಾ ತಿಳಕೊಂಡೆ
ಎಲೆಕ್ಷನ್ ಹತ್ರ ಬಂದ್ರೆ ಎಲ್ಲಾರ್ದು ರಾಗ ಒಂದೇ 
ಟಿಕೇಟು ಕೊಡಿಸುವವನೆ ನಮ್ಮೆಲ್ಲರ ತಂದೆ.. 

ದಿನಾಂಕ :ಏಪ್ರೀಲ್ ೨೩|೨೦೦೮
ಸ್ಪೂರ್ತಿ :  ಗೋಪಿನಾಥ್ ಮುಂದೆ ರಾಜಕೀಯ ಪಕ್ಷಾಂತರ 

Apr 22, 2008

ಕರದಂಟಿನೊಂದಿಗಿನ ನಂಟು

ನನ್ನ ಹಾಗು ನನ್ನವಳ ಊರುಗಳಿಗೆ ಎಲ್ಲಿಲ್ಲದಾ ಸಿಹಿಯ ನಂಟು

ಅವಳೂರಲ್ಲ್ಲಿ ಸಿಗುವದು ಅಂಟಿನಿಂದ ಮಾಡಿದಾ ಕರದಂಟು 
ನನ್ನೂರಲ್ಲಿ ಸಿಗುವದು ಯಾರಿಗೂ ಬೇಡವಾಗದ ಪೇಡಾ 
ಅವಳೂರಿಗೆ ಹೋಗದಿರೆ ಹೇಳ್ತಾರೆ ಅಣ್ಣನ ಮಕ್ಕಳು ನೀ ಮಾಡಬೇಡಾ ತಡಾ
 ಇನ್ನೂ ಯಾಕ ಹೋಗವಲ್ಲಿ ನೀ Go-ಕಾಕಾ 

ದಿನಾಂಕ :  ಏಪ್ರೀಲ್ ೨೨|೨೦೦೮
ಸ್ಪೂರ್ತಿ :  ಅಣ್ಣನ ಮಕ್ಕಳು 

Apr 8, 2008

Slow Down ಮುಂಚೆ ಹಾಗೂ ನಂತರ..

ಅಂದು ತುಂಬಾ ಜೋರಾಗಿ ಹೇಳ್ತಿದ್ದಾ ನಂದಾಗಿದೆ salary ಹೈ ಕ್ಲಾಸ್

ಇಂದು ತುಂಬಾ ಮೆತ್ತಗೆ ಹೇಳ್ತಾನೆ ನಂದಾಗಿದೆ salary ಹೈಕ್ -ಲಾಸ್ 

ದಿನಾಂಕ : ಏಪ್ರೀಲ್ ೬|೨೦೦೮
ಸ್ಪೂರ್ತಿ : Slow Down in 2008

Apr 3, 2008

ಹೆಲ್ಮೇಟ್

ದ್ವಿಚಕ್ರ ವಾಹನ ಓಡಿಸುವಾಗ ತಪ್ಪದೇ ನೀವು ಹಾಕಿ ತಲೆ ಮೇಲೆ ಹೆಲ್ಮೇಟ್ 

ಇಲ್ಲಾಂದ್ರೆ ಆ ಯಮದೇವನಿಗೆ ಆಗ್ತೀರಾ ನೀವು ಅಲ್ಲ್ಲಿ ಮೇಲೆ ಹೊಸಾ hell-mate


ದಿನಾಂಕ : 04/03/2008
ಸ್ಪೂರ್ತಿ :   ಬೆಂಗಳೂರಿನಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಿದ್ದು