ಚಾಳಿ ಟೂ
ನನ್ನವಳು ಬಿಟ್ಟಿರುವಳು ನನ್ನೊಂದಿಗೆ ಚಾಳಿ ಟೂ
ಯಾಕಂದ್ರಾ ನಾ ಹಗಲೆಲ್ಲಾ ಕೇಳ್ತಿನಂತ ಚಾ ಬೈ ಟೂ
ಸ್ಪೂರ್ತಿ : ನೀರಡಿಕೆಗಿಂತ ಹೆಚ್ಚಾದ ನನ್ನ ಚಾಅಡಿಕೆ
ದಿನಾಂಕ: 30-ಎಪ್ರಿಲ್-2017
ಇದು ನಾನು ಕಳೆದ ಹಲವು ವರ್ಷಗಳಲ್ಲಿ ಬರೆದ/ಈಗಲೂ ಬರೆಯುತ್ತಿರುವ ನನ್ನ ಬರಹ/ಚುಟುಕಗಳ ಸಂಗ್ರಹ. ಇದನ್ನು ಓದಿ ನಿಮ್ಮ ಅಭಿಪ್ರಾಯ ಬರೆದು ತಿಳಿಸಿದರೆ ನಾ ಧನ್ಯ..ನಿಮ್ಮವ ಬಸವರಾಜ ಯಾದವಾಡ.
ಚಾಳಿ ಟೂ
ನನ್ನವಳು ಬಿಟ್ಟಿರುವಳು ನನ್ನೊಂದಿಗೆ ಚಾಳಿ ಟೂ
ಯಾಕಂದ್ರಾ ನಾ ಹಗಲೆಲ್ಲಾ ಕೇಳ್ತಿನಂತ ಚಾ ಬೈ ಟೂ
ಸ್ಪೂರ್ತಿ : ನೀರಡಿಕೆಗಿಂತ ಹೆಚ್ಚಾದ ನನ್ನ ಚಾಅಡಿಕೆ
ದಿನಾಂಕ: 30-ಎಪ್ರಿಲ್-2017
ಹೋಮಿಲಿ
ಹೆಣ್ಣಿನ ಕಡೆಯವ್ರರಂದ್ರು ನಮ್ ಹುಡುಗಿ ತುಂಬಾ ಹೋಮಿಲಿ
ನಾನಂದೆ ಮದುವೆಯಾದ ಮೇಲೆ ಹುಡುಗನ್ನ ಮಾಡ್ತಾಳೆ ಬಿಡಿ ಪೂರ್ತಿ Home-ಇಲಿ
ಬರಹ: ಬಸವರಾಜ ಯಾದವಾಡ
ಸ್ಪೂರ್ತಿ: ಹೆಣ್ಣು ಮಕ್ಕಳ ಕಡೆಯವ್ರು
ದಿನಾಂಕ: 26-ಎಪ್ರೀಲ್-2017
ಬ್ಲಾಗಿಷ್ಠ
ನಾನಲ್ಲ ಸ್ಯಾಡಿಷ್ಟ
ಎನಗಿಲ್ಲ ಚಟಗಳು ದುಷ್ಟ
ಸಂಬಳ ಕೇಳಲು ಹೇಳಲು ಇಲ್ಲ ಎನಗಿಷ್ಟ
ಕಲಿತಿರುವೆ ನಾ ಕರ್ಮ ಪ್ರಕಾರ ಬರುವುದು ಕಷ್ಟನಷ್ಟ
ಬರೆಯುವುದೇ ನನಗಿಷ್ಟ
ಬರವಣಿಗೆಯಿಂದಲೇ ನಾ ಬಲಿಷ್ಟ
ಅದಕೆ ನಾನಾಗಿರುವೆ ಬ್ಲಾಗಿಷ್ಟ
ಬರಹ: ಬಸವರಾಜ ಯಾದವಾಡ
ಸ್ಪೂರ್ತಿ : ಪ್ರಾಸ ಪ್ರಪಂಚ
ದಿನಾಂಕ: 13-ಎಪ್ರಿಲ್-2017
ಹೈ-ಲೋ ಜಿಂದಗಿ
High ನಲ್ಲಿ ಸ್ಥೈರ್ಯವ ಉಳಿಸಿಕೊಂಡರಬೇಕು
Low ನಲ್ಲಿ ಧೈರ್ಯವ ಲೋನ್ ತಗೋಬೇಕು
ಬದುಕಿನಲ್ಲಿ High-Low ಎರಡರಲ್ಲೂ balance ಇರಬೇಕು
ಬರಹ: ಬಸವರಾಜ ಯಾದವಾಡ
ಸ್ಪೂರ್ತಿ: ಬದುಕಿನ High-Lowಗಳು
ದಿನಾಂಕ: 12-ಎಪ್ರೀಲ್-2017
ಹಸ್ ಬೆಂಡ
ಮದುವೆಗೆ ಮುನ್ನ ಮಹಾ ಭಂಡ.
ಮದುವೇಲಿ ಆತ ಕೇವಲ ಹಸ್ಬೆಂಡ.
ನಂತರ ತೂಕವಿರದ ತರ್ಮೋಕೊಲ್ ಬೆಂಡ
ಹೈಕಮಾಂಡ್ ಮುಂದೆ ಆಗಲೇಬೇಕು bend ..
ಇಲ್ಲದಿರೆ ಗಂಡ ಪದವಿಯಿಂದ suspend.
ಬರಹ: ಬಸವರಾಜ ಯಾದವಾಡ
ಸ್ಪೂರ್ತಿ : ವಾಟ್ಸಪ್ನಲ್ಲಿ ಬಂದ ವ್ಯಂಗ್ಯಚಿತ್ರ
ದಿನಾಂಕ: 8-ಎಪ್ರಿಲ್-2017
ಕಲ್ಲು
ಪ್ರ್ಯಾಕ್ಟೀಸ್ ಇಲ್ಲಾಂದ್ರೂ ಪ್ರಯತ್ನ ಮಾಡುವೆ ಎನ್ನುವವ ಜೀವನದಿ ಪ್ರ್ಯಾಕ್ಟಿ ಕಲ್ಲು
ಏಕ ಏಕ ಕಾಸು ಸೇರಿಸಿ ಖರ್ಚು ಉಳಿಸಿದವಾ ಎಕನಾಮಿ ಕಲ್ಲು
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಕಲಿತವ ಮೆಥೆಮೆಟಿ ಕಲ್ಲು
ಲೂಜಾಗಿ ಮಾತಾಡದೇ ಎಲ್ಲಾ ಸಮಸ್ಯೆಗೆ ಲಾ ಪ್ರಕಾರ ಉತ್ತರ ಹುಡುಕುವವ ಲಾಜಿ ಕಲ್ಲು
2 ಮಿನಿಟ್ನಲ್ಲಿ ಮ್ಯಾಗಿತರಾ ಕೆಲ್ಸ ಮುಗಿಸುವವ ಮ್ಯಾಜಿ ಕಲ್ಲು
ಟಿಪಿ ಕೈಲಾಸಂ ಓದದಿದ್ರೂ ಕನ್ನಡ ಮಾತನಾಡುವವ ಟಿಪಿ ಕಲ್ಲು
ಕೆಮ್ಮಿದರೂ ಔಷಧಿ ತೆಗೆದುಕೊಡು ದೇಹದಿ ತುಂಬಿಕೊಂಡಿರುವವಾ ಕೆಮಿ ಕಲ್ಲು
ಯಾವ ಕ್ಲಾಸಿಗೂ ಹಾಜರಾಗದೇ ಜೀವನದಿ ಮುಂದೆ ಬಂದವಾ ಕ್ಲಾಸಿ ಕಲ್ಲು
ಸಿನಿಮಾ ನೋಡುತಲೆ ಭ್ರಮಾಲೋಕದಿ ಬದುಕುವವ ಸಿನಿ ಕಲ್ಲು
ಕಾಮಿ ತರ ಕಣ್ಣು ಹೋದೆಡೆ ಮನಸು ಕೊಟ್ಟವಾ ಕಾಮಿ ಕಲ್ಲು
ಹಿಸ್ಟರಿ ಓದದಿದ್ದರೂ ಗಂಟೆಗಟ್ಟಲೇ ಕೊರೆಯುವವ ಹಿಸ್ಟೋರಿ ಕಲ್ಲು
ಕಾಲೇಜಿಗೆ ಹೋಗದೆ ಪರಿಸರ ತಿಳಿದುಕೊಡ ರೈತ ಅವಾ ಎಕೊಲಾಜಿ ಕಲ್ಲು
ಕೆಲ್ಸ ಚೆನ್ನಾಗಿದ್ರೂ ಸದಾ ಕಿಟಿ ಕಿಟಿ ಮಾಡುವವ ಕ್ರಿಟಿ-ಕಲ್ಲು
ಎಷ್ಟೇ ಎತ್ತರಕ್ಕೇರಿದರೂ ತನ್ನ ಮೂಲ ಮರೆಯದವಾ ಎತಿ ಕಲ್ಲು
ಬರಹ: ಬಸವರಾಜ ಯಾದವಾಡ
ಸ್ಪೂರ್ತಿ : ಇಂಗ್ಲೀಷ್ ಶಬ್ದಕೋಶ ತುಂಬಿಕೊಂಡಿರುವ 'ಕಲ್ಲುಗಳು'
ದಿನಾಂಕ: 7-ಎಪ್ರಿಲ್-2017