Dec 25, 2016

ಇಂಡಿಪೆಂಡೆಂಟು

ಇಂಡಿಪೆಂಡೆಂಟು

ನನ್ನವಳಾಗಬೇಕಂತೆ
ಆರ್ಥಿಕವಾಗಿ ಇಂಡಿಪೆಂಡೆಂಟು..
ನಾ ಕೇಳಿದೆ ಯಾಕಂತೆ
ನಾ ಕೊಡಿಸಿಲ್ವಂತೆ ಒಂದೇ ಒಂದು ಪೆಂಡೆಂಟು
ಸ್ಪೂರ್ತಿ: ಪರಿಸ್ಥಿತಿ
ದಿನಾಂಕ:25-ಡಿಸೆಂಬರ್-2016

Dec 11, 2016

ಮೋದಿಯು ಮಾಡಿದ ಪರಸಂಗ ಐತೆ

ಆರ್ಥಿಕ ಪರಸಂಗದ ಗಂಡೆದೆ ಟೀಮ್

ಐನೂರು ಸಾವಿರದ 'ನೋಟ' ದಾಗೆ ನಗೆಯ ಮೀಟಿ
ಹಣಕಾಸಿನಾಟದ ಮೋಜಿನ ಎಲ್ಲೆ ದಾಟಿ
'ಮೋದಿ'ಯು ಮಾಡಿದಾ ಪರಸಂಗಾ ಐತೆ
ಪರಸಂಗಾ ಐತೆ
ಆಹಾ  ಮಡದಿಯ ಮೋಹ ತೊರೆದವನ ಪರಸಂಗಾ ಐತೆ

ಬಡವರ ಬದುಕಿಗೆ ಹೊಸ ನೆಸರು ಅರಳೈತೆ
ಕೆಲದಿನಾ ಕೈನಲ್ಲಿ ಕಾಸಿಲ್ದೆ ಮೈ ಪರಚುಕೊಳ್ಳವಂಗಾಗೈತೆ
ಸಿರಿವಂತರ ಮನಸ್ನಾಗೆ ಹೆದ್ರಿಕೆ ಹುಟ್ಟೈತೆ
ಅವರ ಮೈಯಾಗೆ ನಡುಕ ಶುರುವಾಗೈತೆ.

ಐನೂರು ಸಾವಿರದ 'ನೋಟ' ದಾಗೆ ನಗೆಯ ಮೀಟಿ....

ಬಂಗಾರದ ಮೇಲೂ ಕಡಿವಾಣ ಬಿದ್ದೋಗ್ಐತೆ.
ನನ್ನೆಂಡ್ತಿ ಅಪರಂಜಿ ಚಿನ್ನದ ಮೋಹ ಕಡಿಮೆಯಾಗೈತೆ
ಹಗಲಾಗೆ ಇರುಳಾಗಿನ ಲೂಟಿ ನಿಂತೋಗೈತೆ.
ಬಿಲ್ಲಿಂಗ್ ಮಶಿನಿದ್ದವರಾ ಮುಖದಾಗೆ ನಗೆಬಿಲ್ಲೆ ಮಿನುಗೈತೆ
ನನ್ನ ಹುಡುಗಿ ತನ್ನ ಬ್ಯಾಂಕ್ ಬ್ಯಾಲನ್ಸ ನೋಡಿ ಬಾಯಿ ಬಡಕೊಂಡೈತೆ.

ಇಡಿ ದೇಸದಾಗೆ ಮೋದಿ ಮಾತಿಗೆ ಒಮ್ಮತದ ಸ್ವರವೈತೆ
ರಿಯಲ್ ಎಸ್ಟೆಟ್ನವರು ಕಪ್ಪು ಹಣ ಗಳಿಸಿದ್ದ ಎಸ್ಟೆಂದು ಗೊತ್ತಾಗೋಗೈತೆ
ಅವರ ಮುಖವೀಗ ಬದನೆಕಾಯಿ ತರಾ ಬಿಳಿಚಿಕೊಂಡೈತೆ
ನನ ರಾಣಿ ನಿಜ ರೂಪಾಯಿ ರಂಗಾನೆ ಬದಲಾಯತಲ್ಲೆ

ಐನೂರು ಸಾವಿರದ 'ನೋಟ' ದಾಗೆ ನಗೆಯ ಮೀಟಿ...
ಸ್ಪೂರ್ತಿ: ಪರಸಂಗದ ಗೆಂಡೆತಿಮ್ಮ ಚಿತ್ರದ ಹಾಡು (ನೊಟದಾಗೆ ನಗೆಯ ಮೀಟಿ)
ದಿನಾಂಕ:11/12/2016
ಬರೆದವರು: ಬಸವರಾಜ ಯಾದವಾಡ
http://ehotthige.blogspot.in

ಸಮರಸ

ಸಮರಸ

ಗಂಡ ಹೆಂಡಿರ ಮಧ್ಯೆ ಇರಬೇಕು ಸಮ-ರಸ
ಸಮರಸದಲ್ಲಿ  '' ಕಾರವಿಲ್ಲದಿರೆ ಮಾತ ಮರಸ ಬೇಕು
ಅದರಲಿ 'ಸಮ' ಕಾರವಿರದಿರೆ ಹಾಸ್ಯ ರಸ ವಿರಬೇಕು
ಮನಸ್ತಾಪದ '' ಕಾರ ಮರೆತರೆ ಉಳಿವುದು ಸರಸ
ಸರಸದ '' ಕಾರ ಮರೆತರೆ ಬರೀ ಸಮರ

ಸ್ಪೂರ್ತಿ: ಸುವರ್ಣ ಕನ್ನಡದ ಸುಂದರ ಶಬ್ದಗಳು
ದಿನಾಂಕ: 11-ಡಿಸೆಂಬರ್-2016

ಸೀರಿಯಸ್..someವಾದ

ಸೀರಿಯಸ್..someವಾದ

ಆ ಹೊಸಾ ನೇಲ್ ಪಾಲೀಶ್ ? -Yes
ಆ ಹೊಸಾ ಮೇಕಪ್ ಕಿಟ್ ? -Yes
ಆ ಹೊಸಾ ವಾಚು ? -Yes
ಆ ಹೊಸಾ ರೇಷ್ಮೇ ಸೀರೀ ? -No No

ಮುಂದಿನ 48 ಗಂಟೆ ಕಾಲ ಪರಿಸ್ಥಿತಿ ಸೀರೀ -Yes ಆಯ್ತು
ಸ್ಪೂರ್ತಿ: ಮಾಲ್ ನಲ್ಲಿ ಗಂಡಹೆಂಡತಿಯ ಸಂಭಾಷಣೆ
ದಿನಾಂಕ: 11/12/2016

Dec 4, 2016

ಗಂಡಾಂತರ

ಗಂಡಾಂತರ

ಹೇಳಿದ್ದನ್ನೇ ಕೋಳಿ ತರ ಕೆದಕಿ ಕೆದಕಿ ಹೇಳುವವರು Hen ಮಕ್ಳು
ಕೇಳಿದ್ದನ್ನೇ ಕೇಳಿ ಕೇಳಿ ಗಂಡಾಂತರ ಎದುರಿಸಲು ಗಂBeerವಾಗಿ ಸಿದ್ಧರಾಗಿವವರು Gunಮಕ್ಳು

ಸ್ಪೂರ್ತಿ: ಮಿತ್ರನ Noise Absorption Headphone ಮತ್ತು ಅದರ ಉಪಯುಕ್ತ ತೆಯ ಬಗ್ಗೆ ಚರ್ಚೆ..
ದಿನಾಂಕ: 3/12/2016

Nov 2, 2016

ಮೀಟಿಂಗ್

ಮೀಟಿಂಗ್

ಕೆಲ್ಸಾ ಮಾಡ್ತಿನೆಂದು  ಎತ್ತಿದ್ರು ಕೈ
ಕೆಲ್ಸಾ ಬಂದಾಗ ಕೆಲ್ಸಕ ಮುಂಚೇನು ಎತ್ತಿದ್ರು ಕೈ
ಕೈ ಎತ್ತೋದ್ರಲ್ಲಿ ಇವ್ರುದು ಎತ್ತಿದ ಕೈ

ಸ್ಪೂರ್ತಿಹೀಗೊಂದು ಮೀಟಿಂಗ್
ದಿನಾಂಕ9/7/2016

Oct 10, 2016

ನನ್ನ ಅತೀ ಚಿಕ್ಕ ಬ್ಲಾಗ್

ಹರೀಶ್ಚಂದ್ರ ಘಾಟು

ಹರೀಶ್ಚಂದ್ರ ಘಾಟು
ಹತ್ತೇ ಫೂಟು..

ದಿನಾಂಕ:ಫೆಬ್ರುವರಿ 2013
ಸ್ಪೂರ್ತಿ: ನನ್ನ ಬೈಕ್ ಆಕ್ಶಿಡೆಂಟ್ ಆಗಿ ನಾ ಹರೀಶ್ಚಂದ್ರ ಘಾಟ ಎದುರಿನ ರಸ್ತೆಯಲ್ಲಿ ಬಿದ್ದಿದ್ದು.

Jan 12, 2016

ಬೆಂಗಳೂರ ಟ್ರಾಫಿಕ್

ಬೆಂಗಳೂರ ಟ್ರಾಫಿಕ್

ಬೆಂಗಳೂರ ಟ್ರಾಫಿಕ್ನಲ್ಲಿ ಡ್ರೈವಿಂಗ್ ಮಾಡೊದೊಂದು ಕಲೆ
ಡ್ರೈವ್ ಮಾಡೋಕೆ ಬರಲ್ಲಾಂದ್ರೆ ಅದೊಂದು ಕಪ್ಪು ಕಲೆ

ಸ್ಪೂರ್ತಿ: ಬೆಂಗಳೂರ ಟ್ರಾಫಿಕ್
ದಿನಾಂಕ: ೧೨/೧/೨೦೧೬