Mar 20, 2008

ಅಪಾ(ರ)ರ್ಥ

ಅದು ಯಾಕೋ ಗೊತ್ತಿಲ್ಲಾ...ನಾನು ಎಸ್ಟೇ ಪರಿಶುದ್ಧವಾದ ಮನಸಿನಿಂದಾ ಮಾತಾಡಿದರೂ ನನ್ನ ಸಹೋದ್ಯೋಗಿಗಳು ನನ್ನನ್ನು ತುಂಬಾ ಅಪಾರ್ಥ ಮಾಡ್ಕೋತಾರೆ. ಇತ್ತೀಚೆಗೆ ಏನಾಯಿತು ಅಂದರೆ ಹೊಸದಾಗಿ ನಮ್ಮ ಟೀಮ್ ಸೇರಿರುವ ಅವಿನಾಶ ಯಾವುದೋ ಚಿಕ್ಕ ಬಗ್ ಒಂದನ್ನ ತಗೊಂಡು ಇನ್ನೊಬ್ಬ ಸಹೋದ್ಯೋಗಿ ಕ್ರಿಶ್ಣ ಹತ್ತಿರ ಅದರ ವಿವರ ಕೇಳ್ತಾ ಇದ್ರು..ಕ್ರಿಶ್ಣ ಹೇಳಿದ್ರು ..ಅವಿನಾಶ್ ಅದು Look and Feel ಬಗ್ ರ್ರೀ.. ಜಾಸ್ತಿ ತಲೆ ಕೆಡ್ಸಕೋ ಬೇಡಿ..ಬೇರೇ ಬಗ್ ಇದ್ರೆ ನೋಡ್ರಿ...ಅವಿನಾಶ್ ಅನುಮಾನ ಇನ್ನೂ ಪರಿಹಾರ ಆಗಲಿಲ್ಲಾ...ಮತ್ತೇ ಅದೇ ಪ್ರಶ್ನೆ ಕೇಳಿದರು.. ಪಕ್ಕದಲ್ಲೇ ಇದ್ದ ನಾನು ಅವರಿಗೆ ಸರಳಭಾಷೆಯಲ್ಲಿ ಹೇಳಿದೆ...'ಅವಿನಾಶ್ ಅದು Look and Feel ಬಗ್ ಇದ್ರೆ ...Just Look and Feel'. ಅಶ್ಟಕ್ಕೆ ಎಲ್ರೂ ಅದೇನೋ ಅರ್ಥೈಸಿಕೊಂಡು ಬಿದ್ದು ಬಿದ್ಚು ನಕ್ಕುಬಿಡೋದಾ??....ಸಭ್ಯಸ್ತರಿಗೆ ಎಂತ ಕಾಲ ಬಂತಪ್ಪಾ..ಛೆ..ಛೆ!

೨೦೦೮|ಮಾರ್ಚ್

No comments: