Sep 25, 2024

ಗೇಣ ಮತ್ತು again

ಗೇಣ ಮತ್ತು  again


When you do something again and again 

Confidence is what you gain

When you gain confidence without pain 

You will say ಸ್ವರ್ಗಕ್ಕೆ ಮೂರೇ ಗೇಣ

ದಿನಾಂಕ: 9/25/24 
ಸ್ಫೂರ್ತಿ :    ಹೀಗೆಯೇ  ಯಾರೋ ಒಬ್ರು ಇನ್ನ್ಯಾರನ್ನೋ ಓಲೈಸಲು ಕಷ್ಟವಾದ್ರೂ 
ಕೂಡ  again and again ಪ್ರಯತ್ನ ಪಡತಿದ್ರು...  

Jan 3, 2024

ಸಾಧಕರು ಭಾಧಕರು

ಏನೂ ಹೇಳದೆ ಸಾಧನೆ ಮಾಡುವರು ಸಾಧಕರು

ಏನೂ ಕಾರಣವಿಲ್ಲದೆ ತೊಂದರೆ ಕೊಡುವರು ಭಾಧಕರು
ಏನೂ ಸಾಧನೆಇಲ್ಲದೆ ಕೇವಲ ಉಪದೇಶ ನೀಡುವರು ಭೋಧಕರು


ದಿನಾಂಕ : ೦೬-೦೧-೨೦೨೪
ಸ್ಪೂರ್ತಿ : ಭಿನ್ನ ಭಿನ್ನ ಮನೋಭಾವದ ಮಿತ್ರರು



Jan 21, 2023

ಹೆಂಡತಿ

ಹೆಂಡತಿ

ಗಂಡನ ಕನಸುಗಳಿಗಾಗಿ  ಮಾಡುವಳು ಹವನ  ಹೋಮ
ಅದಕ ಹೆಂಡತಿಗೆ ಅನ್ನುವರು ಹೋಮ ಮೇಕರು 

ಗಂಡನಿಗೆ ಬಾಳಿನಲಿ ಬೆಳಕು ತೋರುವಳು ಕೈಲಿಡಿದು ಟಾರ್ಚ
ಅದಕೆ ಕೆಲವರು ಅನ್ನುವರು ತಪ್ಪಾಗಿ ಟಾರ್ಚರು

ದಿನಾಂಕ: ೨21/01/2023
ಸ್ಪೂರ್ತಿ: ಬ್ಯಾಗ ನಲ್ಲಿದ್ದ ಟಾರ್ಚು 




ಸೈಕಲಿಂಗ 1.0

 ಸೈಕಲಿಂಗ  1.0


ವರ್ಷಕ್ಕೊಮ್ಮೆ ಶ್ರೀಶೈಲ ಪ್ರವಾಸ ಮಾಡಾವ ಶಿವಲಿಂಗ
ಪ್ರಭು ದೇವಾನ ಫಾಲೋ ಮಾಡಾವಾ ಪ್ರಭುಲಿಂಗ 

ಎಲ್ಲಾ ಗುರುವಾರ ಗುಡಿಗೆ ಹೋಗಾವಾ ಗುರುಲಿಂಗ 
ಸಿದ್ಧುನ  ಜೋಕಿಗೆ ಬಿದ್ದ ಬಿದ್ದ ನಾಗಾವಾ ಸಿದ್ಧಲಿಂಗ 

ಮಹಾಲಿಂಗಪುರದಾಗ ಇರಾವಾ ಮಹಾಲಿಂಗ
ನಾಗಪ್ಪನ ಕಂಡರ ಹೆದರದಾವಾ ನಾಗಲಿಂಗ 

ಹುಬ್ಬಳ್ಳಿಯಾಗ ದಿನಾ ಬಸ್ ಓಡಸಾವಾ ಬಸಲಿಂಗ 
ಬಸವಣ್ಣನವರ ಕಾಯಕಾ ಪಾಲಿಸಾವಾ ಬಸವಲಿಂಗ 

ಶ್ರೀರಾಮನಂಗ ಧಾರ್ಮ ಪಾಲನೆ ಮಾಡಾವಾ ರಾಮಲಿಂಗ 
ವಾರಕ್ಕೊಮ್ಮೆ ಪ್ಯಾಡಲ್ ತುಳಿದು ಮಾಡಾವಾ ನಾ ಸೈಕಲಿಂಗ  



ರಚನೆ: ಬಸವರಾಜ ಯಾದವಾಡ
ದಿನಾಂಕ : 29-10-2019
ಸ್ಪೂರ್ತಿ :  ನನ್ನ ಸೈಕಲ್ಲು 

May 29, 2022

ನಂಬರ ಆಟ

ನಂಬರ್ ಆಟ
ಎಲ್ಲಾರಿಗೂ ಬೇಕು ನಂಬರು
ಮಾರ್ಕ್ಸ ಕಾರ್ಡನಿಂದ ರೇಟಿಂಗ್ ಕಾರ್ಡ ತನಕ ಎಲ್ಲದರಲ್ಲೂ ಬೇಕು ನಂಬರು
ಹೆಂಡತಿಯಿಂದ ಹಿಡಿದು ಮ್ಯಾನೇಜರ್ ತನಕ ಕೇಳುವರು ನಂಬರು
ನಂಬರಿಲ್ಲದಿರೆ ಯಾರೂ ನಮ್ಮ ನಂಬರು
ದಿನಾಂಕ:  29-ಮೇ-೨೦೨೨
ಸ್ಪೂರ್ತಿ : ಎಲ್ಲಾ ಕಡೆ ಹರಡಿರುವ ನಂಬರ ಗೇಮ್ 

Apr 16, 2020

ಅಭಿನವ್ ಬಿಂದ್ರಾ

ಅಭಿನವ್ ಬಿಂದ್ರಾ

ನೋಡಿದಿರಾ ನ್ವ್ಯೂಸ್ ತುಂಬಾ ಅಭಿನವ ಬಿಂದ್ರಾ
ಅವರ ಹಾಗೇ ನೀವೇನೂ ಬಂಗಾರ ತಂದ್ರಾ ?
ಕೈ ಬೀಸಕೊಂಡು ಬರಿಗೈಲಿ ಬಂದ್ರಾ ?
ಇಷ್ಟಕ್ಕೂ ಆರಾಧಿಸಲು ನೀವೇನೂ ಶಿಲ್ಪಾಶೆಟ್ಟಿ ಗಂಡ ರಾಜ್ ಕುಂದ್ರಾ?


ರಚನೆ  : ಬಸವರಾಜ ಯಾದವಾಡ
ದಿನಾಂಕ : 31-08-2008
ಸ್ಪೂರ್ತಿ : 2008 ರಲ್ಲಿಅಭಿನವ್ ಬಿಂದ್ರಾ ಭಾರತಕ್ಕೆ ಬಂಗಾರ ಪದಕ ತಂದಿದ್ದು

Nov 2, 2019

ಸೈಕಲಿಂಗ 2.0

ಸೈಕಲಿಂಗ  2.0

ಕರಾಟೆ ಕಿಂಗನ ಪಕ್ಕಾ ಅಭಿಮಾನಿ ಶಂಕರಲಿಂಗ
ಎಲ್ಲ ಭಾವಂದಿರರಲ್ಲಿ ಉದ್ದ ಇರುವವ ಉದ್ಭವಲಿಂಗ
ಜ್ಯೋತಿಯ ಜೊತೆ  ಸಪ್ತಪದಿ ತುಳಿದಾವಾ ಜ್ಯೋತಿರ್ಲಿಂಗ
ಆತ್ಮಬಲದಿಂದ ಸಾಧನೆ ಮಾಡಿದಾವಾ ಆತ್ಮಲಿಂಗ
ಧಿರೇಂದ್ರ ಗೋಪಾಲರಂಗ ಡೈಲಾಗ್ ಹೊಡ್ಯಾವಾ ಶಂಭುಲಿಂಗ
ಎಲ್ಲಾರಿಗೂ ಇಷ್ಟವಾಗುವವಾ ಇಷ್ಟಲಿಂಗ

ಮಾತು ಮಾತಿಗೆ ಧನ್ಯವಾದ ಎನ್ನುವವಾ ಧನ್ಯಲಿಂಗ
ಸೂಪರ್ ಕಂಡಕ್ಟಿವಿಟಿ ಕಂಡು ಹಿಡಿದವಾ  ಕಮೇರ್‌ಲಿಂಗ
ಜಾವಾ ಲಾಂಗ್ವೇಜ್‌ ಕಂಡು ಹಿಡಿದವಾ ಜೇಮ್ಸ ಗಾಸಲಿಂಗ
ಜೋಕ್ ಹೇಳಿ ಎಲ್ಲಾರ ಹೊಟ್ಟಿ ಪಂಚರ್ ಮಾಡಾವಾ ಪಂಚಲಿಂಗ
ಶಾಂತವಾಗಿಯೇ ಎಲ್ಲ ಸಾಧನೆ ಮಾಡಿದಾವಾ ಶಾಂತಲಿಂಗ
ಐದೈದು ನಿಮಿಷಕ್ಕೊಮ್ಮೆ ಮೇಲ್ ಹಾಕಾವಾ ಮೈಲಾರ್‌ಲಿಂಗ

ರಚನೆ: ಬಸವರಾಜ ಯಾದವಾಡ
ದಿನಾಂಕ : 02-11-2019
ಸ್ಪೂರ್ತಿ :  ನನ್ನ ಸೈಕಲಿಂಗ ಬರಹ ಇಷ್ಟಪಟ್ಟು ತಾವೇ ಹೆಸರುಗಳನ್ನು ಹುಡುಕಿ ಸೈಕಲಿಂಗ 2.0 ಬರೆಯಲು ಸೂಚಿಸಿದ ಮಿತ್ರರು