Feb 18, 2008

ಚೆಂಬೂರು

ಅಲ್ಲಿ ಮುಂಬೈ ನಗರದೊಳಗಿದೆ ಚಿಕ್ಕದೊಂದು ಚೆಂಬೂರು 

ಇಲ್ಲಿ ಬೆಂಗಳೂರೇ ಆಗಿದೆ ದೊಡ್ಡದೊಂದು ಚೆಂಬೂರು 
ಈ ಮಲ್ಟಿಪ್ಲೆಕ್ಸು..ಆ ಆನೋಕ್ಸು..ಹೋದಲ್ಲೆಲ್ಲಾ ಬರೀ ಚೆಂಬು.


ದಿನಾಂಕ : 18/02/2008
ಸ್ಪೂರ್ತಿ :  ಚೆಂಬು ಹಾಕಿಸಿಕೊಂಡದ್ದು 

Feb 10, 2008

ಬೆಂಗಳೂರು ದೂರದರ್ಶನ

ಬೆಂಗಳೂರು ದೂರದರ್ಶನ ಕಾರ್ಯಕ್ರಮ ಅಂದ್ರೇನೇ ಮಜಾ
ಸಂಜೆ ಐದು ಘಂಟೆ ಆದ್ರೆ ತಪ್ಪಿದ್ದಲ್ಲ್ಲಾ ಈ ಸಜಾ

ಮೂರು ತಾಸಿನ ಮನೋರಂಜನೆಗೆ ಕಾರ್ಯಕ್ರಮ ಪಟ್ಟಿ
ಅವುಗಳಲ್ಲಿರುವವು ಒಂದಕ್ಕಿಂತ ಒಂದು ಖೊಟ್ಟಿ

ಬೆಂಗಳೂರು ಜಿಲ್ಲೆ ಬಿಟ್ರೆ ಬೇರೇನೂ ನೋಡದು ಇವರ ಕ್ಯಾಮರಾ
ಮರೆತಿಹರು ಇವರು ನಮ್ಮ ಊರಿನ ಆಫೂಸಿನ ಮಾಮರಾ

ಆರು ಘಂಟೆಗೆ ಆರಂಭವಾಗುವದು ಬೆಂಗಳೂರು ದರ್ಶನ
ಅದರ ಹಿಂದೆಯೇ ಬರುವದು ಒಂದು ಗೊಡ್ಡು ಸಂದರ್ಶನ

ಏಳು ಘಂಟೆಗೆ ಇದೆ ಮಾರುದ್ದ ಹೆಸರಿನ ಧಾರಾವಾಹಿ
ಅದರಲ್ಲಿನ ಪಾತ್ರ ಕಥೆ ತಿಳಿದುಕೊಂಡವನೇ ಮಹಾ ಮೇಧಾವಿ

ಏಳು ಮೂವತ್ತಕ್ಕೆ ಬರುವವು ನೋಡು ವಾರ್ತೆಗಳು
ಬೆಂಗಳೂರ ಸುತ್ತಮುತ್ತಣ ಸಮಾರಂಭದ ತುಣುಕುಗಳು

ಇನ್ನೂ ಕಾರ್ಯಕ್ರಮ ನೋಡುತ ಕುಳಿತಿರಲು ನೀವು
ನಿಮಗೂ ತಪ್ಪದೇ ಬರುವದು ಹಾಳು ತಲೆ ನೋವು

ರಚನೆ : ೧೯೯೪
ಸ್ಪೂರ್ತಿ : ಅಂದಿನ ಬೆಂಗಳೂರು ದೂರದರ್ಶನ ಕಾರ್ಯಕ್ರಮಗಳು

Jan 13, 2008

ಮುದ್ದಣ ಮನೋರಮೆಯರ ಸಂಡೆ ಕಾರ್ ಕಾರ್ ಸಲ್ಲಾಪ

ಮುದ್ದಣ : ಪ್ರಿಯೆ ನಾ ತಗೋತಿನಿ ಒಂದು ಹೊಂಡಾ ಸಿಟಿ
ಮನೋರಮೆ : ಅದನ್ಹೇಗೆ ಒಡಿಸ್ತಿಯಾ ಪ್ರಿಯಕರಾ ಬೆಂಗಳೂರೇ ಆಗಿದೆ ಹೊಂಡಗಳ ಸಿಟಿ

ಮುದ್ದಣ : ಹಾಗಿದ್ರೆ ನಾ ತಗೋಳ್ಳಾ ಒಂದು ಟೋಯೋಟೊ ಕೊರೊಲ್ಲಾ
ಮನೋರಮೆ : ಹತ್ತು ಜನುಮದಾಗ ಹುಟ್ಟಿ ಬಂದ್ರೂ ಅದರ ಇ.ಏಂ.ಐ ತೀರಲ್ಲಾ

ಮುದ್ದಣ : ಹಂಗಾರಾ ನನಗ ಬರೋಬ್ಬರಿ ಆ ಮಾರುತಿ ಬ್ಯಾಲಿನೊ..
ಮನೋರಮೆ : ನಿನ್ನ ಹಂಗಾ ಬಿಟ್ರ ಅದರ ಸಾಲ ತೀರಸಕ್ಕ ಮಾರುತಿ ನನ್ನ ಬಂಗಾರದ ಬಳೀನೂ

ಮುದ್ದಣ : ಹೌದೌದು ನನಗ ಸೂಟ್ ಆಗೊದೊಂದ್ ಅದ ಆ ಫೋರ್ಡ್ 

ಮನೋರಮೆ : ನಿನ್ನ ಸದ್ಯದ ಅರ್ಥಿಕ ಪರಿಸ್ಥಿತಿಯೋಳಗ ನಿಂಗ ಮಾಡಾಕಾಗುದಿಲ್ಲಾ ಅದನ್ನ ಅಫೋರ್ಡ್ 

ಮುದ್ದಣ : ಹಂಗಾರಾ ನಾ ತಗೋತಿನಿ ಒಂದ್ ಮಾರುತಿ ಝೆನ್
ಮನೋರಮೆ : ಆ ಮಾಡೆಲ್ ಔಟ್ ಡೇಟ್ ಆದಾಗ ತಗೋಳುದು ಮಹಾ ಎನ್?

ಮುದ್ದಣ : ಹಂಗಾರ ನಾ ತಗೋತಿನಿ ಒಂದ್ ಹ್ಯುಂಡೈ ಸೋನಾಟಾ
ಮನೋರಮೆ : ತಿಂಗಳ ಖರ್ಚಿಗೆ ಸರಿಯಾಗಿ ನೀ ಕೊಟ್ರ ನಾ ತರ್ತಿನೀ ಅನ್ನಪೂರ್ಣಾ ಆಟಾ

ಮುದ್ದಣ : ಚಿನ್ನಾ.. ಹಾಗಾದರೆ ಹೇಗಿದೆ ಆ ಫೀಯಟ್ ಪಾಲಿಯೋ..
ಮನೋರಮೆ : ನನ್ನ ರನ್ನಾ ನೆನಪಿರಲಿ ನಿನ್ನ ಜೇಬು ಯಾವಾಗಲೂ ಖಾಲಿಯೋ

ಮುದ್ದಣ : ಹಂಗಿಸ ಬೇಡವೆ ರಾಣಿ.. ಒಂದಿನ ನಾ ಓಡ್ಸೊ ಕಾರ್ ಇರುತ್ತೆ ಓಪ್ಟ್ರಾ ಶೇವ್ರಲೇಟ್ ಮನೋರಮೆ : ಹಗಲು ಕನಸು..ಸದ್ಯಕ ಅಪೇಕ್ಶಾ ಅನುಶ್ರಿಗೆ ಕೊಡ್ಸಿದ್ರ ಸಾಕು ನೀ ಒಂದೊಂದು ಚಾಕಲೇಟ್..

 ಮುದ್ದಣ : ನೋಡ್ತಾ ಇರೆ ಒಂದಿನಾ ನಾ ತಗೋತಿನಿ ಆ ದೊಡ್ಡ ಮರ್ಸಿಡೆಸ್
 ಮನೋರಮೆ : ಮತ್ತೊಂದ್ ಹೊಸಾ ಸಾಲಾ ಮಾಡಿದ್ರೆ ನಾನಾಗ್ತಿನಿ ಮರ್ಸಿಲೆಸ್

 ಮುದ್ದಣ : ಫ್ಯಾಮಿಲಿ ಕರಕೊಂಡ ಒಡಾಡಕ ಚಲೋ ಅದ ಆ ಹೊಂಡಾ ಸಿಆರಡಿ
ಮನೋರಮೆ : ಆದ್ರ ನಮ್ಮ ಪಾರ್ಕಿಂಗ್ ಜಾಗಾ ಇರುದು ಬರಿ ಐದ ಅಡಿ..

ಮುದ್ದಣ : ಹೌದು ಆ ಪಾರ್ಕಿಂಗ ಜಾಗಕ್ಕ ಸರಿಯಾದ ಕಾರ್ ಫೀಯಟ್ ಪೆಟ್ರಾ
ಮನೋರಮೆ : ಮಹಾರಾಜ ಸಾಲಾ ತಗಸಾಕ ಇನ್ನು ಉಳಿದಿಲ್ಲಾ ಯಾವುದು ಕಾಗದ ಪತ್ರಾ

 ಮುದ್ದಣ : ಶಾಂತಿ: ಶಾಂತಿ: ..ಪ್ರಾಣಸಖಿ..ನಮಗೆ ಸರಿಹೊಂದುವ ಕಾರಾವುದು ನೀನೇ ಹೇಳು.. ಮನೋರಮೆ : ಸಾಲಾಪುರದಲ್ಲಿ ಜನಿಸಿದ ಪ್ರಾಣಸಖನೆ ನೀ ಈಗಾಗಲೆ ಮಾಡಿರುವೆ ಮೈತುಂಬಾ ಸಾಲಾ ಪೂರಾ ನಿನೊಬ್ಬ ಮಹಾ ಹೆವಿ ಸ್ಪೆಂಡರ್ ನಿನಿಗ ಸರಿಯಾಗಿದೆ ಲೀಟರ್ಗೆ ೬೦ ಕೊಡೊ ಹೀರೋ ಹೊಂಡಾ ಸ್ಪ್ಲೆಂಡರ್..

 (ಯಥಾ: ಪ್ರಕಾರ ಮುದ್ದಣ-ಮನೋರಮೆಯರು ತಮ್ಮ ಸ್ಪ್ಲೆಂಡರ್ ಮೇಲೆ ಹೊಗಿ ಫೋರ್ತ್ ಬ್ಲಾಕ್ನಲ್ಲಿ ಚಾ ಕುಡದು ಬನಶಂಕರಿಯಲ್ಲಿ ಕಾಯಿಪಲ್ಲೆ ಖರಿದಿಯೊಂದಿಗೆ ಮತ್ತೊಂದು ವೀಕೆಂಡ್ ದೃಷ್ಯ ಮುಗಿಯುತ್ತದೆ)

ದಿನಾಂಕ : 22/03/2006
ಸ್ಪೂರ್ತಿ :  ಮುದ್ದಣ ಮನೋರಮೆಯರ ಸಲ್ಲಾಪ

Jan 8, 2008

ಬೆಂಗಳೂರೆಂಬ ದ್ರೌಪದಿ

ಬೆಂಗಳೂರೆಂಬ ಈ ದ್ರೌಪದಿಯು ಐದು ವರ್ಷದಲಿ ಐದು ಪತಿಯರನ್ನು (ಸಿ.ಎಂಗಳನ್ನು) ಹೊಂದಿರಲು..
ವಿಪರೀತ ವಾಹನಗಳೆಂಬ ದುಶ್ಯಾಶನರು ದ್ರೌಪದಿಯ
ರಸ್ತೆಗಳೆಂಬ ಇಂಚಿಂಚು ಬಿಡದೆ ಅಪಹರಣ ಮಾಡಿರಲು..
ಈ ಧರ್ಮರಾಯ ಮೌನದಿ ತಲೆ ತಗ್ಗಿಸಿ ತನ್ನ ಅಧ:ಪತನವನ್ನು ತಾನೇ ನೋಡುತಿರುವನು..
ಪರ ರಾಜ್ಯ ಪಾಲನೆಯಲ್ಲಿ ತೊಡಗಿರುವ ಶ್ರೀ ಕ್ರಿಶ್ಣ ಪರಮ್ಮಾತ್ಮಾ ಬೇಗನೆ ಕಣ್ಣು ತೆರೆಯಪ್ಪಾ..
ಈ ದ್ರೌಪದಿಯ ಮೇಲಿ ಒಂದಿಂಚಾದರೂ ವಸ್ತ್ರವ ಕರುಣಿಸಪ್ಪಾ..

ಸ್ಪೂರ್ತಿ : ಧರಮ್-ದೇವೇಗೌಡ ಸರಕಾರ ಪತನ ಪ್ರಸಂಗ

ಡಿಸೆಂಬರ್|೨೦೦೫

ಮೈಕ್ರೋಸಾಫ್ಟ ಫಂಡಾ

ನಮ್ಮ ಮೈಕ್ರೋಸಾಫ್ಟ ಅಪ್ಪ್ಲಿಕೇಶನ್ಸ್ ಎಲ್ಲಾ ಬಗ್ ಪ್ರೀ 

ನಿಮಗೇನಾದ್ರೂ ಬಗ್ಸ್ ಸಿಕ್ರ ಗಾಬರಿಯಾಗ ಬ್ಯಾಡ್ರಿ .. 
ಅದಕ ನಾವು ಬೇರೆಯಾಗಿ ಮಾಡುದಿಲ್ಲಾ ಚಾರ್ಜ ರ್ರೀ.. 
ಅದಕ ನಾವು ಹೇಳುದು ನಮ್ಮದೆಲ್ಲಾ ಅಪ್ಪ್ಲಿಕೇಶನ್ಸ್ ಜೋಡಿ ಬಗ್ ಪ್ರೀ..! 

ದಿನಾಂಕ : 01/03/2006
ಸ್ಪೂರ್ತಿ :ಮೈಕ್ರೋಸಾಫ್ಟ ಅಪ್ಪ್ಲಿಕೇಶನ್ಸ್ ಜೋಡಿ ಬಂದ ಪ್ರೀ ಬಗ್ ಗಳು  

ನಾನು - ನನ್ನಾಕೆ

ನಾ ಡೆವಲಪರ್ ನಾ ಮಾಡಿದ ಕೋಡಿಗೆ
ನಾ ಟೆಸ್ಟರ್ ನನ್ನಾಕೆ ಮಾಡಿದಾ ಅಡಿಗೆಗೆ
- ಮಾರ್ಚ್|೨೦೦೬

ಎಮ್-ಜಿ ರೋಡು - ನಡು

ಎಮ್-ಜಿ ರೋಡಿನಲ್ಲಿ ಭಿಕ್ಶುಕರ ಮೈಮೇಲಿಲ್ಲಾ ಬಟ್ಟೆ 

ಕಾಂಚಾಣವಿರದಾ ಕಾರಣಾ ಅನುಭವಿಸುತಿಹರು ಕಡು-ಬಡತನ 
ಅಲ್ಲೇ ಶಾಪಿಂಗ್ ಮಾಡೋ ಲಲನೆಯರ ಮೈಮೇಲಿಲ್ಲಾ ಪೂರ್ತಿ ಬಟ್ಟೆ 
ಕಾಂಚಾಣವಿದ್ದರೂ ಅನುಭವಿಸುತಿದೆ ಅವರ ನಡು-ಬಡತನ 


ದಿನಾಂಕ : 01/03/2006
ಸ್ಪೂರ್ತಿ : ಎಂ.ಜಿ ರೋಡ್