ಎಥಿಕಲ್ ಮನುಷ್ಯರು
ನಿನ್ನೊಳು ನೈತಿಕತೆ ಸತ್ತೊಡನೆಯೇ ಕರೆಯುವರು ನಿನ್ನ ಏsತಿಕ್ಕಲು ಮನುಷ್ಯ
ಸ್ಪೂರ್ತಿ:ಎಥಿಕಲ್ ಮನುಷ್ಯರು
ಇದು ನಾನು ಕಳೆದ ಹಲವು ವರ್ಷಗಳಲ್ಲಿ ಬರೆದ/ಈಗಲೂ ಬರೆಯುತ್ತಿರುವ ನನ್ನ ಬರಹ/ಚುಟುಕಗಳ ಸಂಗ್ರಹ. ಇದನ್ನು ಓದಿ ನಿಮ್ಮ ಅಭಿಪ್ರಾಯ ಬರೆದು ತಿಳಿಸಿದರೆ ನಾ ಧನ್ಯ..ನಿಮ್ಮವ ಬಸವರಾಜ ಯಾದವಾಡ.
ಎಥಿಕಲ್ ಮನುಷ್ಯರು
ನಿನ್ನೊಳು ನೈತಿಕತೆ ಸತ್ತೊಡನೆಯೇ ಕರೆಯುವರು ನಿನ್ನ ಏsತಿಕ್ಕಲು ಮನುಷ್ಯ
ಸ್ಪೂರ್ತಿ:ಎಥಿಕಲ್ ಮನುಷ್ಯರು
ಗೇಣ ಮತ್ತು again
When you do something again and again
Confidence is what you gain
When you gain confidence without pain
You will say ಸ್ವರ್ಗಕ್ಕೆ ಮೂರೇ ಗೇಣ
ದಿನಾಂಕ: 9/25/24
ಸ್ಫೂರ್ತಿ : ಹೀಗೆಯೇ ಯಾರೋ ಒಬ್ರು ಇನ್ನ್ಯಾರನ್ನೋ ಓಲೈಸಲು ಕಷ್ಟವಾದ್ರೂ ಕೂಡ again and again ಪ್ರಯತ್ನ ಪಡತಿದ್ರು...
ಏನೂ ಹೇಳದೆ ಸಾಧನೆ ಮಾಡುವರು ಸಾಧಕರು
ಹೆಂಡತಿ
ಸೈಕಲಿಂಗ 1.0
ನನ್ನ ಪಾಲಿಸಿ
ನಾ ಅನ್ನೋ ಬದಲು ಅಂದರೆ ನಾವೆಲ್ಲಾ
ಇರುವೆನು ಸದಾಕಾಲ ನಾwell
ಯಾರ ಮಾತು ಕೇಳೇನು
ಇದು ನನ್ನ policy ಅಂತ
ಯಾರಿಗೂ ಹೇಳೇನು
ನೀವೂ ಪಾಲಿಸಿ ಅಂತ
ನನ್ನ ಪಾಲಿಸಿಗೆ ನಾನೇ ವಿಮೆದಾರ
ನನ್ನ ಕರ್ಮಕೆ ನಾನೇ ಜಮಾದಾರ
ದಿನಾಂಕ: ೨೪/೪/೨೦೧೯
ಸ್ಪೂರ್ತಿ: ಸುಧಾ ಮೂರ್ತಿ ಅವರ ಪುಸ್ತಕ 'ಸಾಮಾನ್ಯರಲ್ಲಿ ಅಸಾಮಾನ್ಯರು'
ಸಮಾನತೆ
ಮಹಿಳೆಯರ ಹೋರಾಟ ಅವರ ಹಕ್ಕಿಗಾಗಿ
ಪುರುಷರ ಹೋರಾಟ ಅವರ ಹೊಸ ಹಕ್ಕಿಗಾಗಿ
ದಿನಾಂಕ: 8-ಮಾರ್ಚ್-2019
ಸ್ಪೂರ್ತಿ : ಸ್ತ್ರೀ-ಪುರುಷರ ಸಮಾನತೆಯ ಘೋಷಣೆಗಳು
ನಲ್ಲ
ನಾನಂದೆ ನಾ ನಿನ್ನ ನಲ್ಲ
ಅಲ್ಲ ಅಲ್ಲ ನೀ ನನ್ನ ನಲ್ಲ
ನನ್ನ ಸಪ್ನಗಳ ಕೊಂದ ನೀ ಕ್ರಿಮಿ ನಲ್ಲ...
ಸ್ಪೂರ್ತಿ: ಹಾಗೆ ಸುಮ್ಮನೆ
ದಿನಾಂಕ:೧೪-ಫೆಬ್ರುವರಿ-೨೦೧೮
ಕೈ ಕೆಸರು
ಕೈ ಕೆಸರು
ಬಾಯಿ ಮೊಸರು
ನೆಲಕ್ಕೆ ಬಿದ್ದಿತು ಹಸ್ತ
ಜನ ಒಪ್ಪಿತು ಸಿಧ್ಧ ಹಸ್ತ
ರಾಗಾ ಕೈಯಿಗೆ ಕೆಸರು
ಅಮಿತ್ ಬಾಯಿಗೆ ಮೊಸರು
ಗುಜರಾತ್ ನಲ್ಲುಳಿತು ಮೋದಿ ಹೆಸರು
ಸ್ಪೂರ್ತಿ: ಗುಜರಾತ್ ಚುಣಾವಣೆ
ದಿನಾಂಕ: ೨೧-ಡಿಸೆಂಬರ್-೨೦೧೭
ಕಷ್ಟಮರ್ ಕೇರ್
ಅಲ್ಲಿ ಕಷ್ಟಮರ್ ಹೇಳಿದ್ದೆಲ್ಲಾ ಖರೇ
ಇಲ್ಲಿ ನಮ್ಮ ಕಷ್ಟಕ್ಕೆ ಅನ್ನುವರಿಲ್ಲಾ ಕ್ಯಾರೇ
ಅಲ್ಲಿ ಜೀವನ ಒಗ್ಗಿದೆ
ಇಲ್ಲಿ ಜೀವನ ತಗ್ಗಿದೆ
ಅವರು ಕೊಡುವರು ನಮಗೆ ಸಮಯಕ್ಕೆ ಸರಿಯಾಗಿ ಸೇವೆ
ಇವರು ಮಾಡುವರು ನಮ್ಮ ಸಮಯ ಸರಿಯಾಗಿ Shave ಎ
ಅವರು ಕಷ್ಟಮರ್ ಗೆ ಕೇರ್ ಎನ್ನುವರು
ಇವರು ಕಷ್ಟಮರ್ ಗೆ ಕೆರ ಎನ್ನುವರು
ಸ್ಪೂರ್ತಿ: ದೊಡ್ಡ ಮತ್ತು ಚಿಕ್ಕ ಊರುಗಳಲ್ಲಿನ ಕಷ್ಟಮರ್ ಕೇರ್ ನ ಅನುಭವ
ದಿನಾಂಕ: ೬-ಡಿಸೆಂಬರ್-೨೦೧೭
ರಾಮ ಕೋಟಿ
ಎಲ್ಲರು ಬರೆವರು ರಾಮ ಕೋಟಿ
ನಾ ಬರೆವೆ Rhyme ಕೋಟಿ
ಯಾರೊಂದಿಗೂ ಬೇಡವೆನಗೆ ಪೈಪೋಟಿ
ನನಗೆ ನಾನಾದರೆ ಸಾಕು ಸಾಟಿ
ಭಗವಂತ ಕೊಡುವ ಮುನ್ನ ಎನಗೆ ಸೂಟಿ
ಪ್ರತಿದಿನ ಹನಿಗವನ ಬರೆಯಲು ಮಾಡುವೆ ನಾ ಓಟಿ
ಸ್ಪೂರ್ತಿ : ರಾಮಕೋಟಿ
ದಿನಾಂಕ: ೯-ಡಿಸೆಂಬರ್-೨೦೧೭
ಜಪಾನಿ ಹೆಸರುಗಳು
ಫ್ಯೂಜಿಗಿಂತಲೂ ತೆಳ್ಳಗಿರುವಾವಾ ಫ್ಯೂಜಿ
ಸೂಜಿಗಿಂತ ಚೂಪ ಕಣ್ಣಿನಾಂವಾ ಸೂಜಿ
ಮಜಾಕಿಲೇ ಕೆಲಸ ಮಾಡಾಂವಾ ಮಿಯಾಜಾಕಿ
ಕವನ ಬರೆದು ರಂಜಿಸಾಂವಾ ಕಾವಾಸಾಕಿ
ಸದಾ ಇನ್ನೊಬ್ಬರ ಜೋಡಿ ಬರಾಂವಾ ಇನಾಬಾ
ಸದಾ ಸಂತೋಷದಿಂದಿರಾಂವಾ ಸತೋಷಿ
ಹಿರೋಗಳ ಹಾಗೆ ಸ್ಮೈಲ್ ಕೊಡಾಂವಾ ಹಿರೋಷಿ
ಏಕಾಏಕಿ ಸೀರಿಯಸ್ ಆಗಾಂವಾ ತಕಾಯುಕಿ
ಸುಜನರ ನಡುವೆ ಸದಾ ಇರಾಂವಾ ಸುಜುಕಿ
ಬೆಳ ಬೆಳಿಗ್ಗೆ ಕಾಲ್ ಮಾಡಾಂವಾ ಏಬಿಸಾವಾ
ಗಸಗಸೆ ಪಾಯಸಾ ಇಷ್ಟ ಪಟ್ಟಾವಾ ಹಸೆಗಾವಾ
ದಿನಾಂಕ: ೨೭-ನವೆಂಬರ್-೨೦೧೭
ಸ್ಪೂರ್ತಿ: ಜಪಾನಿ ಸಹೊದ್ಯೋಗಿಗಳ ಹೆಸರು ನೆನಪಿಟ್ಟುಕೊಂಡ ಬಗೆ
ಲಂಚ ಲಂಚ ಲಂಚ
ಟೇಬಲ್ ಮೇಲಿಂದ ತಿಂದ್ರೆ Lunch
ಟೇಬಲ್ ಕೆಳಗಿಂದ ತಿಂದ್ರೆ ಲಂಚ
ದಿನಾಂಕ : ೧೭-ನವೆಂಬರ್-೨೦೧೭
ಸ್ಪೂರ್ತಿ : ಸತೀಶ ಆಚಾರ್ಯ ಅವರ ಕಾರ್ಟೂನ್
ಚಾ ರಜಾ
ನಾ ಚಾರಜಾಗಲು ದಿನಾ ಐದು ಕಪ್ ಚಾ ಕೋಟಾ ರಿ
ನನ್ನವಳೀಗ ನನಗೆ ಪೂರ್ತಿ ಚಾ-ರಜಾ ಕೊಟ್ಟಿರಲು
ನಾನಾಗಿರುವೆ ಕನಿಷ್ಠ ಚಾರ್ಜಿಲ್ಲದಾ ಬ್ಯಾಟರಿ
ದಿನಾಂಕ : ೧೭-ನವೆಂಬರ್-೨೦೧೭
ಸ್ಪೂರ್ತಿ : ನನ್ನ ಚಾ-ಕುಡುಕರತ್ನನ ಪರಪಂಚ
(K) UBER
ಯಾರೋ ಕೇಳಿದರು ಊಬರಕ್ಕೆಕೆ ಬಂತು ಬರ
ನಾನಂದೆ ಹೆಸರಲ್ಲೇ ತುಂಬಿದೆ ಬರ
ಅದಕೆ ಸೇರಿಸಿದ್ದರೆ K ಆಗುತಿದ್ದಾ ಕುಬೇರ
ರಚನೆ: ಬಸವರಾಜಜ ಯಾದವಾಡ
ಸ್ಪೂರ್ತಿ : UBER ಕ್ಯಾಬ್ ಗಳು
ದಿನಾಂಕ: 9-ಮೇ-2017