Dec 28, 2015

ಸುಖ

ಸುಖ
ಸುಖವನ್ನು sacrifice ಮಾಡಿದ್ರೆ ಬರೋದೆಲ್ಲಾ ಸಕ್ಕರೀ ಪಾಯ್ಸಾಣ್ಣಾ..
ಸುಖವೇ ಬೇಕೆಂದು ಬಯಸಿದ್ರೆ ಬರೋದೆಲ್ಲಾ ಬರೀ Poisonಣ್ಣಾ

ದಿನಾಂಕ : ೨೮/೧೨/೨೦೧೫
ಸ್ಪೂರ್ತಿ : ಮನೇಲಿ ಮಾಡಿದ ಪಾಯಸಾ 

ದೊಡ್ಡೋರು ಹೇಳಿದ್ದು

ದೊಡ್ಡೋರು ಹೇಳಿದ್ದು

ದೊಡ್ಡೋರು ಹೇಳಿದ್ದು ಅಂದು ಕನ್ನಡದಲ್ಲಿ
'ಬಡಿವಾರ ಬೇಡ'
ಅದು ಸೂಕ್ತ ಇಂದು ಈ ಇಂಗ್ಲಿಷ್ ಯುಗದಲ್ಲಿ
'Buddy War ಬೇಡಾ'

ದಿನಾಂಕ: 28-12-2015
ಸ್ಪೂರ್ತಿ : ಸದಾ ಬಡ್ಡಿ ಬಡ್ಡಿ ಎನ್ನುವ ಸಹೋದ್ಯೋಗಿ 

Sep 10, 2015

ಮಿಸ್ಟ-ರಿ

ಮದುವೆಗೆ ಮುನ್ನ

ಎದೆ ತಟ್ಟಿ ಹೇಳಿದಾ ನಾ Mister ರೀ
ಜಂಭದಿ ಕೇಳಿದಾ ಎಲ್ಲಿ ನನ್ನ Miss ರೀ

ಮದುವೆ ನಂತರ ...

ಅವನ Wife ಆದ್ಲು Mistery
ಅವನ Life ಆಯ್ತು Misery


ದಿನಾಂಕ: ೧೦-ಸೆಪ್ಟೆಂಬರ್ -೨೦೧೫
ಸ್ಪೂರ್ತಿ :  ಅನುಭವ 

Sep 7, 2015

ಗುಟ್ಟೊಂದ ಹೇಳುವೆ ಪುಡಾರಿ ಮಕ್ಕಳೇ ...

ಗುಟ್ಟೊಂದ ಹೇಳುವೆ ಪುಡಾರಿ ಮಕ್ಕಳೇ ...

 ಟ್ಯಾ ಕ್ಸ್ ಕಟ್ಟಿದ್ದು ತೆರಿಗೆ ಇಲಾಖೆಗೆ
ಮುಚ್ಚಿಟ್ಟಿದ್ದು ಲೋಕಾಯುಕ್ತರ ದಾಳಿಗೆ


ಸ್ಪೂರ್ತಿ: 'ಗುಟ್ಟೊಂದ ಹೇಳುವೆ ಪುಟಾಣಿ ಮಕ್ಕಳೇ' ಹಾಡು
ದಿನಾಂಕ : ೭-ಸೆಪ್ಟೆಂಬರ್-೨೦೧೫

Jun 22, 2015

ಆಫೀಸು

ಆ ಸರ್ಕಾರಿ ಫೀಸು.. ಈ ಸರ್ಕಾರಿ ಫೀಸು
ಎಂದು ನಮ್ಮಿಂದ ಬರಿ ಫೀಸು ಕಟ್ಟಿಸಿಕೊಳ್ಳೋ ಜಾಗಾನೇ
ಆಫೀಸು ಅಲ್ವಾ ?


ದಿನಾಂಕ: ೧೩-ಜೂನ್ -೨೦೧೫
ಸ್ಪೂರ್ತಿ: 'ಆಫೀಸ್ ' ಎಂದು ಕನ್ನಡದಲ್ಲಿ ಶೀರ್ಷಿಕೆ ಹೊಂದಿದ್ದ ಒಂದು ಸರ್ಕಾರಿ ಕಚೇರಿ

Jun 18, 2015

ಲೈಫ್ ನಲ್ಲಿ ನಾ ತುಂಬಾ ಲೋನಲಿ

Student ಲೈಫ್ ಕಳೆದೆ ನಾ Education ಲೋನಲಿ
Married ಲೈಫ್ ಕಳೆದೆ ನಾ Credit Card ಲೋನಲಿ
Mid- ಲೈಫ್ ಕಳೆದೆ ನಾ Home ಲೋನಲಿ
ನಾನಿರಬೇಕು ಇನ್ನೂ Friends ಲೋನಲಿ


ದಿನಾಂಕ: ೪/೬/೨೦೧೫
ಸ್ಫೂರ್ತಿ: ನನ್ನ ಲೋನ್ಲಿ ಲೈಫ್

ಅಧಿಕ ಪ್ರಸಂಗಿ

ನೀವು ಅಂದ್ಕೊಡ್ಡಿದ್ದು ಇವನೊಬ್ಬ ಅಧಿಕ ಪ್ರಸಂಗಿ
ನಾನು ಕೇಳಿಸ್ಕೊಂಡಿದ್ದು ನಾನೊಬ್ಬ ಅಧಿಕ 'ಪ್ರ್ರಾಸಂ'ಗಿ

ದಿನಾಂಕ: ೧೮/೬/೨೦೧೫
ಸ್ಪೂರ್ತಿ :  ಎಲ್ಲೀಲ್ಲೂ ಪ್ರಾಸ ಹುಡುಕುವ ನನ್ನ ಚಟ